ಹಲಸಿನ ಕಾಯಿ ದೋಸೆ
ಹಲಸಿನಕಾಯಿ ದೊರೆಯುವ ಈ ಸಮಯದಲ್ಲಿ ಗರಿಗರಿಯಾಗಿ ಎದ್ದು ಬರುವ ಹಲಸಿನ ಕಾಯಿ ದೋಸೆ ಎಲ್ಲರ ಫೇವರಿಟ್ ದೋಸೆ.ತನ್ನ ಬಣ್ಣ ಹಾಗೂ ರುಚಿಯಿಂದ ಎಲ್ಲರ ಬಾಯಲ್ಲೂ ನೀರೂರಿಸುವ ತಾಕತ್ತು ಹಲಸಿನಕಾಯಿ ದೋಸೆಗಿದೆ.
ಬೇಕಾಗುವ ಸಾಮಗ್ರಿಗಳು:-
ಎರಡು ಕಪ್ ಅಕ್ಕಿ, ನಾಲ್ಕು ಕಪ್ ಹಲಸಿನ ಸೊಳೆ, ಉಪ್ಪು (ಕೆಲವು ಹಲಸಿನಸೊಳೆಗೆ ಅಕ್ಕಿ ಬಹಳ ಕಡಿಮೆ ಸಾಕು.. ದೋಸೆ ಹಿಟ್ಟು ಕಡೆಯುವಾಗ ಹದ ನೋಡಿಕೊಳ್ಳಬೇಕು)
ಮಾಡುವ ವಿಧಾನ:-
ಹಲಸಿನ ಕಾಯಿಯನ್ನು ತುಂಡು ಮಾಡಿ ಸೊಳೆ ತೆಗೆದಿಡಿ.ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿದ ದೋಸೆ ಅಕ್ಕಿಯೊಂದಿಗೆ ಸೊಳೆ ಸೇರಿಸಿ ರುಬ್ಬಿ.ಉಪ್ಪು ರುಚಿಗೆ ತಕ್ಕಷ್ಟು ಹಾಕಿ.ಹಿಟ್ಟು ಸಾಮಾನ್ಯ ಉದ್ದಿನ ದೋಸೆ ಹಿಟ್ಟಿನ ಹದಕ್ಕಿರಲಿ.ಕಾವಲಿಗೆ ಬಿಸಿಮಾಡಿ ದೋಸೆ ತೆಳ್ಳಗೆ ಹರವಿ.ಎಲ್ಲಾ ಸರಿಯಾದರೆ ರೋಸ್ಟ್ ಆಗಿ ಬರುವುದು.(ದೋಸೆ ಸರಿಯಾಗಿ ಏಳದಿದ್ದರೆ ಸ್ವಲ್ಪ ಅಕ್ಕಿ ಹಿಟ್ಟು ಕಲಸಿ ಹಾಕಬಹುದು..)ಪ್ರತಿ ಬಾರಿ ದೋಸೆ ಮಾಡುವಾಗಲೂ ಕಾವಲಿಗೆ ಎಣ್ಣೆ ಹಾಕಿಕೊಳ್ಳುವುದು ಬೇಡ..ದೋಸೆಯ ಮೇಲೆ ಎಣ್ಣೆ ಹಾಕಿಕೊಳ್ಳಬಹುದು.
ಇದನ್ನು ಜೇನು ,ಕೊಬ್ಬರಿ ಚಟ್ನಿಯೊಂದಿಗೆ ಸೇವಿಸಿದರೆ ರುಚಿಕರ.

✍️... ಅನಿತಾ ಜಿ.ಕೆ.ಭಟ್.
18-06-2020.
18-06-2020.
Ruchiyaada dose...
ReplyDeleteಹೌದು.ಗರಿಗರಿಯಾದ ರುಚಿಕರವಾದ ದೋಸೆ.,, ಧನ್ಯವಾದಗಳು 💐🙏
Delete