#ದೇವ್ರೇ ಮಾಡಿದ್ ಜೋಡಿ
ಬಿಗಿದಾಯ್ತಲ್ಲ ಮಂಗಳಸೂತ್ರ
ಇನ್ನು ನಾನೇ ರಾಣಿ ನಿಂಗೆ
ನಾನೇನಲ್ಲ ಹಳ್ಳಿ ತಿಮ್ಮಿ
ಬಾ ನನ್ನ್ ಹಿಂದೆ ಹೀಗೆ||೧||
ಜಾತ್ರೆ ಸಂತೆಗೆ ಒಯ್ತೀನಂತ
ಬಿಡ್ತಾ ಇದ್ದೆ ರೈಲು
ಮಾತು ಮರ್ತ್ರೆ ಬಿಡ್ತೀನೇನು
ಕುತ್ಗೇಲಿದ್ದ ಶಾಲು||೨||
ಅತ್ಲಾಗ್ ಇತ್ಲಾಗ್ ನೋಡ್ದೇ ಬಾರೋ
ನನ್ನ್ ಮುದ್ದಿನ್ ರಾಜಾ
ಆ ಹುಡ್ಗೀರ್ನೆಲ್ಲ ಮೀರ್ಸೋ ಚೆಲ್ವಿ
ನಾನೇ ನಿನ್ನ ರೋಜಾ||೩||
ಅಳುಕ್ತಾ ನಿಂತ್ರೆ ಸುಮ್ಕಿರ್ತೀನಾ
ಎಳೀತೀನ್ ಬದುಕಲ್ ಮುಂದೆ
ನಾನೋ ನೀನೋ ಯಾರೆಳೆದ್ರೇನು
ಜೀವ್ನದ್‌ಬಂಡಿ ಸಾಗ್ಬೇಕ್ ಬೀಳ್ದೆ ಹಿಂದೆ||೪||
ಸ್ವರ್ಗದಾಗೆ ದೇವ್ರೇ ಮಾಡ್ದ
ನನ್ನ ನಿನ್ನ ಜೋಡಿ
ಕಷ್ಟಸುಖ ಸಮನಾಗ್ ಹಂಚ್ಕೊಂಡು
ಬಾಳೋಣಿನ್ನು ಕೂಡಿ||೫||
✍️...ಅನಿತಾ ಜಿ.ಕೆ.ಭಟ್.
10-12-2021.
ಮಾಮ್ಸ್‌ಪ್ರೆಸೊ ದಿನದ ಚಿತ್ರಕ್ಕೆ ಬರೆದ ಸಾಲುಗಳು.
ಚಿತ್ರ ಕೃಪೆ: ಮಾಮ್ಸ್‌ಪ್ರೆಸೊ.
.
.
.
.
👌👌
ReplyDelete