Saturday, 25 December 2021

ಶುಭಹಾರೈಕೆ

 






#ಶುಭಹಾರೈಕೆ

ಪ್ರೀತಿಯ ಹಾರೈಕೆಯು... ನಿನಗೆ
ಪ್ರೀತಿಯ ಶುಭಹಾರೈಕೆಯು||ಪ||
ವರುಷವೊಂದು ಏರಿದೆ ನಿನ್ನ ಹುಟ್ಟಿಗೆ
ನಿಮಿಷದಂತೆ ಕಳೆದುಹೋಯ್ತು ಕಾಲದೊಂದಿಗೆ||ಅ.ಪ.||

ಚಿಮ್ಮುತಿದೆ ಇಂದು ಸಂತಸದ ಹೊನಲು
ಉದರದಿಂದ ಧರೆಗಿಳಿದ ಕೌತುಕದ ಸುದಿನ
ನೂರಾರು ಹಣತೆಗಳ ಪ್ರಕಾಶ ಪ್ರತಿ ನಗುವಲೂ
ಪಸರಿಸುತ ಸಾಗು ಖುಷಿಯನು ಅನುದಿನ||೧||

ನಮ್ಮ ಬಾಳಿಗೆ ನಿನ್ನಾಗಮನವೇ ಸ್ಫೂರ್ತಿ
ಬಾಳು ಉತ್ತುಂಗದಲಿ ಗಳಿಸುತಲಿ ಕೀರ್ತಿ
ಹೃದಯವರಿತು ನಡೆದಾಗು ಶಾಂತಮೂರ್ತಿ
ತುಂಬಿರಲಿ ಮನದೊಳಗೆ ಹಿರಿಯರಲಿ ಪ್ರೀತಿ||೨||

ಗೆಲುವು ತುಂಬಲಿ ನೀ ಹೆಜ್ಜೆಯಿಟ್ಟಲ್ಲಿ
ಹೆಜ್ಜೆಗುರುತು ಮೂಡಿಸು ನಡೆವ ಹಾದಿಯಲ್ಲಿ
ಒಲವೆಂಬ ಮಂತ್ರವ ಬೆರೆಸು ಬಾಂಧವರೊಡನೆ
ಛಲವೆಂಬ ತಂತ್ರವ ಇರಿಸು ಕಾಯಕದೊಳಗೆ||೩||

ಕಿರಿಯರ ಪ್ರಾರ್ಥನೆ ನಿನ್ನ ಒಳಿತನು ಬೇಡಿ
ಹಿರಿಯರ ಹಾರೈಕೆ  ನಿನ್ನ ಏಳ್ಗೆಗೆ ಮುನ್ನುಡಿ
ಜನುಮ ದಿನವು ನೂರು ಉರುಳುತಲಿರಲಿ
ಪ್ರತಿದಿನವು ಶುಭದಿನವು ಅಂದುಕೋ ನಿನ್ನಲಿ||೪||

✍️... ಅನಿತಾ ಜಿ.ಕೆ.ಭಟ್.
25-12-2021.










.

.

.

.

.





No comments:

Post a Comment