#ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 💐
ವರುಷ ಒಂದು ಉರುಳಿದೆ,
ಹಳೆಯ ಕ್ಯಾಲೆಂಡರಿನ ಜಾಗಕ್ಕೆ ಹೊಸದು ಬಂದು ಮೆರೆಯುತ್ತಿದೆ..
ಹಿಂದಿನ ಕಹಿನೆನಹುಗಳ ಮನದ ಗೋಡೆಯಿಂದ ತೆಗೆದು,
ಹೊಚ್ಚ ಹೊಸ ಹೊಂಗನಸುಗಳಿಂದ ಬದುಕನ್ನು ಸಿಂಗರಿಸಬೇಕು..
ದುಃಖ ದುಮ್ಮಾನಗಳೆಲ್ಲ ಕರಗಿ ಬಿಡಲಿ
ಸುಖಶಾಂತಿ ನೆಮ್ಮದಿಯು ಸಮೃದ್ಧವಾಗಲಿ
ದ್ವೇಷ ಅಸೂಯೆಯ ಮನಸ್ಥಿತಿಯ ನಿಗ್ರಹಿಸಿ
ಪ್ರೀತಿ ಪ್ರೇಮದ ಬಾಂಧವ್ಯದಿಂದ ಹೃದಯ ಶ್ರೀಮಂತವಾಗಲಿ..
ಚಿಗುರು ಚಿಗುರುಗಳಲ್ಲಿ ಪುಟಿಯುತ್ತಿರುವ ನವಚೈತನ್ಯ,
ವರ್ಷವಿಡೀ ನಮ್ಮ ಮನದಂಗಳದಲ್ಲಿ ನಲಿಯುತ್ತಿರಲಿ..
ಕಳೆದುಹೋದ ಭರವಸೆ ವಿಶ್ವಾಸ ನಿರಾಸೆಗಳು,
ಹೊಸ ನಿರ್ಧಾರ ಬದ್ಧತೆ ಕಾರ್ಯತಂತ್ರಗಳಿಗೆ ಮುನ್ನುಡಿಯಾಗಲಿ..
ಸತ್ಕರ್ಮಗಳೇ ದೇವರು
ಸದ್ವಿಚಾರಗಳೇ ಆರಾಧನೆ
ಸಚ್ಚಿಂತನೆಯೇ ನೈವೇದ್ಯ
ಸಚ್ಚಾರಿತ್ರ್ಯವೇ ಸುಮ ಆದಾಗ ದೊರಕುವ
ಸತ್ಫಲವೇ ಸುಪ್ರಸಾದ.. ಅದುವೇ ಬದುಕಿಗೆ ಅಭಯ, ಧೈರ್ಯ, ಮುನ್ನಡೆಯುವ ಶಕ್ತಿ..
ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 💐
ಸುಖ ಸಂತೋಷ ಸಮೃದ್ಧಿಯಾಗಿ ಸಮಸ್ತರಿಗೂ ಒಳಿತಾಗಲಿ.
✍️.. ಅನಿತಾ ಜಿ.ಕೆ.ಭಟ್.
01-01-2022.
No comments:
Post a Comment