ಬಾಲರ ನೀರಾಟ
ಝುಳು ಝುಳು ಹರಿಯುವ
ತಿಳಿನೀರಲಿ ಖುಷಿಯ ಆಟ
ಬೊಗಸೆಯ ಜೋಡಿಸಿ
ಬಳುಕುವ ಮೀನ ಹಿಡಿವನೋಟ||
ತಿಳಿನೀರಲಿ ಖುಷಿಯ ಆಟ
ಬೊಗಸೆಯ ಜೋಡಿಸಿ
ಬಳುಕುವ ಮೀನ ಹಿಡಿವನೋಟ||
ಆಚೆಯ ದಡಕೂ ಈಚೆಯ ಕಡೆಗೂ
ಸಂಧಿಸುವ ಕಾಲು ಸಂಕ
ತುಂಟತನದ ಬಾಲರಿಗೆ
ನೀರಲಿ ಆಡುವ ತವಕ||
ಸಂಧಿಸುವ ಕಾಲು ಸಂಕ
ತುಂಟತನದ ಬಾಲರಿಗೆ
ನೀರಲಿ ಆಡುವ ತವಕ||

ಹಲಸಿನ ಮರವೋ ಕೆಸವಿನ ಸೊಪ್ಪೋ
ತುಂಬಿದೆ ಹಸಿರೇ ಹಸಿರು
ಮಳೆಯೋ ಬಿಸಿಲೋ ಏನೇಬರಲಿ
ಚಿಣ್ಣರಿಗೆ ಆಟವೆ ಉಸಿರು||
ತುಂಬಿದೆ ಹಸಿರೇ ಹಸಿರು
ಮಳೆಯೋ ಬಿಸಿಲೋ ಏನೇಬರಲಿ
ಚಿಣ್ಣರಿಗೆ ಆಟವೆ ಉಸಿರು||
ಬಾಲ್ಯದ ದಿನಗಳ ಸ್ವಚ್ಛಂದತೆಗೆ
ಆಟಿಕೆ ಏನೂ ಬೇಡ
ಬೆಳೆಯುತ ಮುಂದಕೆ,ಬೆಳೆವುದು
ಬೇಡಿಕೆ ಪಟ್ಟಿಯು ಕೂಡಾ||
ಆಟಿಕೆ ಏನೂ ಬೇಡ
ಬೆಳೆಯುತ ಮುಂದಕೆ,ಬೆಳೆವುದು
ಬೇಡಿಕೆ ಪಟ್ಟಿಯು ಕೂಡಾ||
ಅಂಗಿಯೆ ಇರದ ಭಂಗಿಯ
ಮಗುವಿಗೆ ನೀರಲಿ ಮೋಜು
ಬಿಂಗಿಯ ಬಿಡದಿಹ ಹರೆಯ
ಮೀನನು ಹಿಡಿಯುವ ಗೌಜು||
ಮಗುವಿಗೆ ನೀರಲಿ ಮೋಜು
ಬಿಂಗಿಯ ಬಿಡದಿಹ ಹರೆಯ
ಮೀನನು ಹಿಡಿಯುವ ಗೌಜು||
ನೀರಾಟ ಚಂದ...
ReplyDeleteಬಾಲ್ಯದ ಸವಿನೆನಪುಗಳು... ಥ್ಯಾಂಕ್ಯೂ 💐🙏
Delete