ಪಪ್ಪಾಯ ದೋಸೆ
ಬಲಿತ ಪಪ್ಪಾಯ ಕಾಯಿಗಳಿಂದ ದೋಸೆ ಮಾಡಬಹುದೆಂದು ಇತ್ತೀಚೆಗೆ ಗೆಳತಿ ತಿಳಿಸಿದ್ದಳು.ಪಪ್ಪಾಯ ಸ್ವಲ್ಪ ಉಷ್ಣವೆನಿಸಿದರೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:-
ಎರಡು ಕಪ್ ದೋಸೆ ಅಕ್ಕಿ,ಎರಡು ಕಪ್ ಬಲಿತ ಪಪ್ಪಾಯಿಯ ತುಂಡುಗಳು,ಅರ್ಧ ಕಪ್ ತೆಂಗಿನತುರಿ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:-
ಪಪ್ಪಾಯಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ನೀರಿನಲ್ಲಿ ಹತ್ತು ನಿಮಿಷ ಹಾಕಿಡಿ.ನಂತರ ನೀರು ಬದಲಾಯಿಸಿ ಒಮ್ಮೆ ತೊಳೆದುಕೊಳ್ಳಿ.(ಅದರಲ್ಲಿದ್ದ ಮೇಣದ ಅಂಶ ತೆಗೆಯಲು).
ದೋಸೆ ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿ ಇಡಬೇಕು.ಚೆನ್ನಾಗಿ ತೊಳೆದುಕೊಂಡ ನಂತರ ಪಪ್ಪಾಯ ಹೋಳುಗಳು, ತೆಂಗಿನಕಾಯಿ ತುರಿಯೊಂದಿಗೆ ನೆನೆಸಿದ ಅಕ್ಕಿಯನ್ನು ಕಡೆಯಿರಿ.ಹಿಟ್ಟು ನುಣ್ಣಗಾಗಬೇಕು.ಉಪ್ಪು ಸೇರಿಸಿಕೊಳ್ಳಿ..ಕಾವಲಿಯನ್ನು ಬಿಸಿ ಮಾಡಿ ಎಣ್ಣೆ ಅಥವಾ ತುಪ್ಪ ಹಾಕಿ ದೋಸೆ ಹುಯ್ಯಿರಿ...ಕಲರ್ ಫುಲ್ ದೋಸೆ ಎರಡೇ ನಿಮಿಷದಲ್ಲಿ ಸಿದ್ಧ. ಚಟ್ನಿಯೊಂದಿಗೆ ದೋಸೆಯನ್ನು ಸವಿಯಿರಿ..

✍️... ಅನಿತಾ ಜಿ.ಕೆ.ಭಟ್.
19-06-2020.
19-06-2020.
Dose 👌👌
ReplyDeleteನೀವು ಹೇಳಿದ ರೆಸಿಪಿ.ಸರಿಯಾಗಿ ಬಂದಿದೆ... ರುಚಿಕರ..
Delete