Sunday, 21 June 2020

ಯೋಗ ನಮ್ಮ ದೇಹಕ್ಕೆ ಸುಗಮ ಸಂಗೀತವಾಗಲಿ



ಯೋಗ ನಮ್ಮ ದೇಹಕ್ಕೆ ಸುಗಮ ಸಂಗೀತವಾಗಲಿ

ಸಪ್ತ ಸ್ವರಗಳು ಶ್ರುತಿಯಲಿ
ಬೆರೆತರೆ ಸುಸ್ವರ ಸಂಗೀತ
ಅಷ್ಟಾಂಗಗಳ ಸಿದ್ಧಿಯಲಿ
ಪಡೆವುದು ಯೋಗ ಸಮಾಧಿ||


ಶ್ರುತಿ ಲಯ ತಾಳ ಬಾಳಲಿ
ಹೊಂದಿರೆ ಬಾಳೇ ಸಂಗೀತ
ಧ್ಯಾನ ಪ್ರಾಣಾಯಾಮ ಯೋಗ
ಕಾಪಾಡಲು ಸಮಚಿತ್ತ||


ಬೇಗುದಿಯೆಲ್ಲ ದೂರೀಕರಿಸುವ
ಶಾಂತಿಯೇ ಇಂಪಿನ ಆಲಾಪ
ರೋಗ ರುಜಿನಗಳು ಓಡುವ
ನಿತ್ಯದ ಯೋಗದ ಸಲ್ಲಾಪ||


ದಾಸವರೇಣ್ಯರ ಭದ್ರಬುನಾದಿ
ಕರ್ನಾಟಕ ಸಂಗೀತ
ಪತಂಜಲಿ ಮಹರ್ಷಿಗಳು ನೀಡಿದ
ಕೊಡುಗೆ ಯೋಗಶಾಸ್ತ್ರ||


ಸುಗಮ ಸಂಗೀತ ಭಕ್ತಿ ಭಾವದಿ ಪರಾಕಾಷ್ಠೆ
ಸೂರ್ಯನಮಸ್ಕಾರ ಪ್ರಾಣಾಯಾಮದಿ ನಿಷ್ಠೆ
ಸಂಗೀತದ ರಾಗ,ಓಂಕಾರದ ಝೇಂಕಾರ
ಸುಂದರ ಜೀವನ, ಮನವು ಸುಮಧುರ||


ಯೋಗ ನಮ್ಮ ದೇಹಕ್ಕೆ
ಸುಗಮ ಸಂಗೀತವಾಗಲಿ
ಯೋಗ ನಮ್ಮ ದೇಶಕ್ಕೆ
ಆರೋಗ್ಯದ ಹೆಗ್ಗುರುತಾಗಲಿ||

                         
✍️... ಅನಿತಾ ಜಿ.ಕೆ.ಭಟ್
21-06-2020.

2 comments: