ಯೋಧರಿಗೆ ಗೌರವ ಸಲ್ಲಿಸೋಣ
ನಡುಗುವ ಚಳಿಯಲು
ಗಡಿಯನು ಕಾಯುವ
ಗಂಡೆದೆ ವೀರರ ನೆತ್ತರಕೋಡಿಗೆ
ಮಿಡಿದಿದೆ ಭಾರತ ಜನತೆ||೧||
ಹೊಂಚನು ಹಾಕಿ ನರಿಬುದ್ಧಿಯ
ಸಂಚನು ಚೀನಾ ಹೂಡಿ
ಮಿಂಚಿನ ಕಾರ್ಯಾಚರಣೆಗಿಳಿದರು
ಕೆಚ್ಚೆದೆ ಶೂರರು ನೋಡಿ||೨||
ನಮ್ಮಯ ಲಡಾಕ್ ಪ್ರಾಂತದಲಿ
ಸುಮ್ಮನೆ ಕಾಲಿಡುವಿರೇಕೆ?
ಕಿಮ್ಮತ್ತಿಲ್ಲದೆ ರುಂಡಚೆಂಡಾಡಿ
ಯಮನೆಡೆ ಅಟ್ಟುವೆವು ಜೋಕೆ||೩||
ನುಗ್ಗುವ ಯತ್ನದಲಿದ್ದವರನು
ಬಗ್ಗು ಬಡಿದು ಧರೆಗುರುಳಿಸಿ
ಕುಗ್ಗದೆ ಎದೆಯನು ನೀಡಿದ ಯೋಧರು
ಹಿಗ್ಗಿನಿಂದಲೇ ತಾಯರಕ್ಷಣೆಗೈದರು||೪||
ಚೋರ ಚೀನಾದ ದುರುಳತನಕೆ
ವೀರ ಮರಣವ ತಾವು ಪಡೆದು
ಭಾರತಾಂಬೆಯ ವೀರಶೂರ ಕಲಿಗಳು ವಿರಮಿಸಿಹರು ಬಾವುಟಹೊದ್ದು||೫||
ಸ್ವದೇಶೀ ವಸ್ತುಗಳ ಬಳಸುತ
ವಿದೇಶೀ ಚೀನಾದ ಮಾಲುಗಳ ತ್ಯಜಿಸಿ
ಅದರ ಮದವಡಗಿಸಿ,ಪಾಠಕಲಿಸಿ
ಯೋಧರಿಗೆ ಗೌರವ ಸಲ್ಲಿಸೋಣ||೬||
✍️... ಅನಿತಾ ಜಿ.ಕೆ.ಭಟ್.
24-06-2020.
ನಮ್ಮ ಮನೆ ಕೈ ತೋಟ... ಫೇಸ್ಬುಕ್ ಗ್ರೂಪ್ ನ ಥೀಂ..ನಮ್ಮ ಕೈತೋಟದ ಶ್ವೇತ ಪುಷ್ಪಗಳಿಂದ ಯೋಧರಿಗೆ ನುಡಿನಮನ ಅರ್ಪಿಸೋಣ...ಇದರಲ್ಲಿ ಪ್ರಕಟಿಸಿದ ಬರಹ..ಮತ್ತು ಹೂವು..
ಉತ್ತಮ ಸಂದೇಶ ಕವನದ ಮೂಲಕ...
ReplyDeleteಅವರ ಪ್ರಾಣ ತ್ಯಾಗ ಕ್ಕೆ ನನ್ನದೊಂದು ಗೌರವಾರ್ಪಣೆ..💐🙏
Delete