Tuesday, 23 June 2020

ಮುದ್ದು ಗೊಂಬೆ




ಮುದ್ದುಗೊಂಬೆ


ಅಮ್ಮಾ..ಇದು ನನ್ನದೇ ಗೊಂಬೆ
ಯಾರಿಗೂ ಕೊಡಲಾರೆ
ಅಣ್ಣನು ಆಟಕೆ ಕೇಳಿದರೆ
ಕೊಡಿಸಿರಿ ಅವಗೆ ಬೇರೆ||

ಅಪ್ಪನು ತಂದಿಹ ಮುದ್ದಿನಗೊಂಬೆಯ
ದಿನವೂ ನಾನೇ ಮೀಯಿಸುವೆ
ಮೀಯಿಸಿ ಬೊಟ್ಟು ಪೌಡರ್ ಹಾಕಿ
ಲಾಲಿಯ ಹಾಡಿ ಮಲಗಿಸುವೆ||

ಅಳುತ ಎದ್ದರೆ ಸೊಂಟಕೆ ಸೆರಗನು ಕುತ್ತಿ
ಮಗುವನು ಎತ್ತಿ ಮುದ್ದಿಸುವೆ
ಮಣ್ಣಿ ಹಾಲು ಬೇಗನೆ ಕಾಯಿಸಿ
ಪುಟ್ಟನೆ ಚಮಚದಿ ತಿನ್ನಿಸುವೆ||

ಶಾಲೆಗೆ ನಾನು ಹೋಗಲೇ ಏನು
ಮುದ್ದಿನ ಗೊಂಬೆಯ ಬಿಟ್ಟು
ದಿನವಿಡೀ  ಗೊಂಬೆಗೆ ಕಾವಲು ನೀನೇ
ಅಣ್ಣಗೆ ಮುಟ್ಟಲು ಕೊಟ್ಟರೆ ಸಿಟ್ಟು||

ಒಂಟಿ ಗೊಂಬೆಗೆ ಆಟಕೆ ಬೇಕು
ಇನ್ನೊಂದು ಮುದ್ದು ಪುಟಾಣಿ
ಒಂದರ ಕೈಯೊಳು ಇನ್ನೊಂದರ
ಕೈಯಿರಿಸಿ ಶಾಲೆಗೆ ಹೋಗುವೆ ಕಾಣಿ||

✍️... ಅನಿತಾ ಜಿ.ಕೆ.ಭಟ್.
24-06-2020.
ಚಿತ್ರ ಹವಿಸವಿ ಕೃಪೆ

2 comments:

  1. ಪುಟಾಣಿ ಗೊಂಬೆಗೆ... ಆಟದ ಗೊಂಬೆಗೆ 👌🏼👌🏼

    ReplyDelete
    Replies
    1. ಮಗುವಿನ ಮುಗ್ಧತೆ... ಥ್ಯಾಂಕ್ಯೂ 💐🙏

      Delete