ಒಲವು ನಲಿವ ಹಂಚಲಿ
ಹಳೆಯ ಕೊಳೆಯು ಎಲ್ಲ ಕಳೆದು
ನವ ವರುಷ ಹರುಷ ತುಂಬಲಿ
ಜಾಡ್ಯ ಮೌಢ್ಯ ಪರದೆ ಸರಿದು
ಅರಿವ ಕಿಡಿಯು ಮೂಡಲಿ||೧||
ನಡೆದ ಹಾದಿ ಕಲಿತ ಪಾಠ
ಭರವಸೆಯ ಭಾವ ಬಿತ್ತಲಿ
ಗೆಲುವ ಮಾಲೆಯಲ್ಲಿ ಸೋಲು
ಛಲದ ಏರು ಮೆಟ್ಟಿಲಾಗಲಿ||೨||
ಸುಮದ ಕಂಪು ಮನದಿ ಪುಳಕ
ತಂದು ನಗುವೆ ಬಾಳು ಎನ್ನಲಿ
ಮುಳ್ಳ ಮೇಲೆ ದಿನವು ಕಳೆದು
ಮೆರೆವ ಸತ್ಯ ನಿತ್ಯ ಜಗದಲಿ||೩||
ಮಿತದ ಭೋಗ್ಯ ಯೋಗ್ಯ ತಿನಿಸು
ಆರೋಗ್ಯ ಭಾಗ್ಯ ಕಾಯಲಿ
ಹಿತದ ನುಡಿಯು ಸ್ಥಿತದ ಪ್ರಜ್ಞೆ
ಯಶದ ಭಾಷ್ಯ ಬರೆಯಲಿ||೪||
ಭೂತದ ಸಿಹಿ ವರ್ತಮಾನಕೆ
ಸವಿಯ ಇಂಬು ನೀಡಲಿ
ಕಹಿಯ ಬಿಟ್ಟು ಗುರಿಯೆಡೆಗೆ ನೆಟ್ಟು
ಗಟ್ಟಿ ಹೆಜ್ಜೆ ಗುರುತು ಮೂಡಲಿ||೫||
ಜವಾಬ್ದಾರಿ ಹೆಗಲಿಗೇರಿಸಿ ನಡೆಯೆ
ಈಶ ಕರುಣೆ ತೋರಲಿ
ಜಗದ ಜೀವಕೋಟಿಯ ಕಾಯುತ
ಒಲವು ನಲಿವ ಹಂಚಲಿ||೬||
✍️... ಅನಿತಾ ಜಿ.ಕೆ.ಭಟ್.
25-12-2020.
ಸೌಹಾರ್ದ ಬಳಗ- ಸಿಗ್ನೇಚರ್ ಲೈನ್-59
(ಹಳೆಯ ಕೊಳೆಯು ಎಲ್ಲ ಕಳೆದು
ನವ ವರುಷ ಹರುಷ ತುಂಬಲಿ)
👌👏👏
ReplyDeleteಧನ್ಯವಾದಗಳು 🙏💐
Delete