Friday, 6 August 2021

ಜೋಡೆತ್ತು




ಜೋಡೆತ್ತು

ನಡೆಯೋಣ ಬಾ ಹೀಗೆ ಜೋಡಿಯಾಗಿ
ಹೂಡೋಣ ಒಡೆಯನ ಕೂಳಿಗಾಗಿ||ಪ|| ಮೂಡಣದ  ಕರಿಮೋಡ ಸಾಲಾಗಿ
ಧರೆಗಿಳಿವ ಮುನ್ನ ಮುತ್ತಹನಿಯಾಗಿ||ಅ.ಪ.||

ಹದವಾಗಿ ಹೆಜ್ಜೆ ಒಂದೊಂದೆ ಇರಿಸಿ
ನೇಗಿಲ ಹೊರೆಗೆ ಹೆಗಲಾಗಿ
ಮಳೆಚಳಿಸುಡುಬಿಸಿಲು ಹಸಿಕೆಸರ
ಲೆಕ್ಕಿಸದೆ ದುಡಿಯೋಣ ನಾವು ಪೈರಿಗಾಗಿ||೧||

ಆಗೊಮ್ಮೆ ಈಗೊಮ್ಮೆ ಒದೆಗೆಬೆನ್ನೊಡ್ಡಿ
ನಡೆದಾಗ ಹೊಲವು ಹಸನಾಗಿ
ಭೂತಾಯಿ ಬಸಿರು ಹಸಿರಾಗಿ ತೊನೆದು
ನಿಂತಾಗ ದಣಿವು ನಲಿವಾಗಿ||೨||

ನಮ್ಮೊಳಗೆ ಎಂದೂ ಭೇದಬೇಡ
ಸಾಗೋಣ ಕಾಯಕದಿ ಮನವನಿರಿಸಿ
ಕಾಳಗದಿ ತಾಡಿದರೆ ಸೋಲುನೋವು
ಮನದೊಳಗೆ ವಿರಸವನು ಬೆಳೆಸಿ||೩||

ನಮ್ಮಯ ಸೇವೆ ಒಡೆಯನಬೆವರಹನಿ
ನೆಲದಾಯಿ ಹರಸಿದರೆ ಫಸಲು
ಹಸಿದಿಹ ಹೊಟ್ಟೆಗೆ ಅನ್ನವನೀಯುವ
ಕಾಯಕವೆ ಜಗದಲಿ ಮಿಗಿಲು||೪||

✍️ಅನಿತಾ ಜಿ.ಕೆ.ಭಟ್.
23-03-2021.

ಈ ಹಾಡನ್ನು ರಾಗಸಂಯೋಜನೆ ಮಾಡಿ ಮಧುರವಾಗಿ ಹಾಡಿದ್ದಾರೆ ಕಲ್ಪನಾ ಸುರೇಶ್ ಜೈನ್. ಕೆಳಗಿನ ಲಿಂಕ್ ಬಳಸಿ ವಿಡಿಯೋ ವೀಕ್ಷಿಸಿ...

https://youtu.be/65X_GTjlJ5k




No comments:

Post a Comment