#ಸೋಜಿಗದ ನೇಸರ
ಕತ್ತಲೆ ಮುಸುಕನು
ಜಾರಿಸಿ ಮೆಲ್ಲನೆ
ರವಿಯು ಇಣುಕಿಹನು||
ಹಕ್ಕಿಯ ಚಿಲಿಪಿಲಿ
ಗಾಯನ ಕೇಳಿ
ಹೊಂಗಿರಣವ ಸೂಸಿಹನು||೧||
ಎಲೆಗಳ ಇಬ್ಬನಿ
ಸರ್ರನೆ ಕರಗಲು
ಎಂಥಾ ಸೋಜಿಗವು||
ಮೊಗ್ಗುಗಳೆಲ್ಲ
ಅವನೆಡೆ ದಿಟ್ಟಿಸಿ
ಅರಳುತ ನಲಿದಿಹವು||೨||
ಬೆಳಗಿನ ಕಿರಣದಿ
ಮೈಯನು ಒಡ್ಡಲು
ತುಂಬುವ ಡಿ ಜೀವಸತ್ವ||
ಜಗವನು ಬೆಳಗುವ
ಭಾನು ಪ್ರಕಾಶಕೆ
ಎಲ್ಲರೊಂದೇ ಎಂಬ ತತ್ವ||೩||
ಗುಡುಗಿನ ಸದ್ದಿಗೂ
ಮಿಂಚಿನ ಥಳುಕಿಗೂ
ಅಂಜದೆ ನಿಂತಿಹ ಸೂರ್ಯ||
ರಜೆಯನು ಬಯಸದೆ
ನೆಪವನು ಹೇಳದೆ
ಮಾಡುವ ನಿತ್ಯವೂ ಕಾರ್ಯ||೪||
✍️... ಅನಿತಾ ಜಿ.ಕೆ.ಭಟ್.
#momspressoshortstories
#momspresso kannada ದ ಶಿಶುಗೀತೆ ರಚನಾ ಸವಾಲಿಗಾಗಿ ರಚಿಸಿದ ಹಾಡು.
#ಶಿಶುಗೀತೆ #ಮಕ್ಕಳಸಾಹಿತ್ಯ #ಅಭಿನಯಗೀತೆ
No comments:
Post a Comment