Thursday, 19 August 2021

ಲಕ್ಷ್ಮಿಯೇ ಬಾರಮ್ಮಾ


#ಲಕ್ಷ್ಮಿಯೇ ಬಾರಮ್ಮಾ

ನೊಸಲಲಿ ಸಿಂಧೂರ ಶೋಭಿತೆ
ನೂಪುರಧಾರಿಣಿ ಲಕ್ಷ್ಮಿಯೇ ಬಾರಮ್ಮಾ
ನಸುನಗೆ ಚೆಲ್ಲುತ ಮನವನು ಮುದದಿ
ಬೆಳಗುವ ಮಂಗಳೆ ನೀನಮ್ಮಾ||೧||

ವಾರಿಧಿಮಥನದಿ ನಾಟ್ಯವನಾಡುತ
ನಾರಿಯ ರೂಪದಿ ಬಂದವಳೇ
ಹರಿಯ ಭಾಮಿನಿ ತ್ರಿಲೋಕಜನನಿ
ಸಿರಿವರಗಳನು ಕೊಡುವವಳೇ||೨||

ಮಿಂದುಮಡಿಯಲಿ ಚಂದದಿ ಭಜಿಸಲು
ಬಂದು ನೀನು ನೆಲೆಸಮ್ಮಾ
ಮಂದಮತಿಯ ಕುಂದುಗಳನು ಮನ್ನಿಸಿ    ಎಂದೆಂದೂ  ಹರಸಮ್ಮಾ||೩||

ವೆಂಕಟರಮಣಿ ಹಿರಣ್ಮಯಿ ರೂಪಿಣಿ
ಕನಕರತ್ನ ಮಣಿ ಮಾಲೆಯಲಿ
ಸಂಕಟಹಾರಿಣಿ ಕಿರೀಟಧಾರಿಣಿ
ಪೂಜಿಸುವೆನು ತನ್ಮಯ ನೋಟದಲಿ||೪||

ದೀಪವ ಬೆಳಗಿಸಿ ಸುಮಗಳನರ್ಪಿಸಿ
ಜಪಿಸುವೆ ನಿನ್ನಯ ನಾಮವನು
ತಾಪವನಳಿಸಿ ಕಷ್ಟಕೋಟಿಯಕರಗಿಸೆ
ಈ ಪರಿ ಬೇಡುವೆನು||೫||

✍️... ಅನಿತಾ ಜಿ.ಕೆ.ಭಟ್.

ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. 💐 ಲಕ್ಷ್ಮೀದೇವಿಯು ಸಕಲ ಸೌಭಾಗ್ಯಗಳನ್ನು ನೀಡಿ ಸನ್ಮಂಗಲವನ್ನುಂಟುಮಾಡಲಿ..🙏



No comments:

Post a Comment