Sunday, 13 February 2022

ಒಲವೆಂದರೆ....

 




#ಒಲವೆಂದರೆ...

ಕತ್ತಲೆಯ ಕೂಪದಲಿ ಬೆಳಕಿನ
ಕಂದೀಲಲ್ಲವೇ ಒಲವು
ಪ್ರತಿಕ್ಷಣವು ಮಿಡಿವ ತುಡಿವ
ಹೃದಯದ ಭಾವವೇ ಒಲವು...||೧||

ಜಗವೆಲ್ಲ ಇರಿದರೂ ಬಾಚಿತಬ್ಬುವ
ಆ ತೋಳಲ್ಲವೇ ಒಲವು
ಮನದ ತೊಳಲಾಟದಲಿ ಭರವಸೆಯ
ಚಿಲುಮೆಯೇ ಒಲವು...||೨||

ಸೋತರೂ ಗೆದ್ದರೂ ಸಮನಾಗಿ
ಬೆನ್ನುತಟ್ಟುವುದಲ್ಲವೇ ಒಲವು
ಸುಖದಪಲ್ಲಂಗದಲಿ ಸುಧೆಯಾಗಿ
ಹರಿಯುವುದೇ ಒಲವು...||೩||

ಮಾತಿನಲಿ ಅರಳದ ಪುಟಗಳ
ತೆರೆದು ಓದುವುದಲ್ಲವೇ ಒಲವು
ಕಣ್ಣಸನ್ನೆಯಲಿ ಉಲಿದು ಉಲ್ಲಾಸವ
ಬಿತ್ತುವುದೇ ಒಲವು...||೪||

ಬಾಳತಿರುವಲಿ ಜೊತೆನಿಲುವ
ದೃಢಚಿತ್ತವಲ್ಲವೇ ಒಲವು
ಕೇಳದೆಯೇ ದೇವ ನೀಡುವ
ಸುಂದರ ಭಿಕ್ಷೆಯೇ ಒಲವು...||೫||

✍️... ಅನಿತಾ ಜಿ.ಕೆ.ಭಟ್.

2 comments: