Friday, 25 February 2022

ಪ್ರಿಯತಮೆ. #ಕವನ

 


#ಪ್ರಿಯತಮೆ

ಜೀವನದಿ ಭರವಸೆಯ ಚಿಲುಮೆ
ನಗುಮೊಗದ ಚೆಲುವೆ ನನ್ನ ಪ್ರಿಯತಮೆ
ಹೂ ಮನಸಿನ ಪ್ರೇಮವಾಣಿಯ ಸರದಾರಿಣಿ
ಸದಾ ಹಿತವ ಬಯಸುವ ನನ್ನ ರಮಣಿ||೧||

ಕಣ್ಣಂಚಲಿ ಸೆಳೆವ ತುಂಬು ಮಾಂತ್ರಿಕತೆ
ಒಲವ ಬಂಧನದ ಮೋಹಕ ಸುಮಲತೆ
ನಿತ್ಯವೂ ಜೊತೆನಡೆವ ಮಧುರ ಬಂಧನ
ಸವಿಬಾಳ ಹಾದಿಗೆ ಇವಳೇ ನನ್ನ ಚೇತನ||೨||

ಎಂದೆಂದೂ ಮರೆಯಲಾರೆ ನಿನ್ನ ಸ್ಫೂರ್ತಿಯ
ನಡೆವೆನು ನುಡಿದಂತೆ ಇಲ್ಲ ತಿಳಿ ಅತಿಶಯ
ಕಣ್ಮುಚ್ಚಿದರೂ ಕಾಣುವುದು ನಿನ್ನದೇ ಬಿಂಬ
ಆವರಿಸಿರುವೆ ನೀ ನನ್ನ ಮನದ ತುಂಬ||೩||

✍️... ಅನಿತಾ ಜಿ.ಕೆ.ಭಟ್.
04-02-2022.

#ಪ್ರತಿಲಿಪಿಕನ್ನಡ ದೈನಿಕ ಕವನ
#ದೈನಿಕ ವಿಷಯ- ಪ್ರಿಯತಮೆ


No comments:

Post a Comment