Tuesday, 1 March 2022

ಶಿವ ನಾಮಸ್ಮರಣೆ

 


#ಶಿವ ನಾಮಸ್ಮರಣೆ

ಶಶಿಧರ ಶುಭಕರ ಗೌರೀಪ್ರಿಯ
ಭವಹರ ನಟವರ ಬಿಲ್ವಪ್ರಿಯ||ಪ||

ಸುಜನರ ಪೋಷಕ ಮಂಗಳಕಾರಕ
ನೀಲಕಂಠ ಶಿವ ಸರ್ವೇಶ
ತ್ರಿಲೋಕನಾಥ ಸೃಷ್ಟಿಸ್ಥಿತಿಲಯಕಾರಣ
ಗಜಚರ್ಮಾಂಬರ ಗಿರಿಜೇಶ||೧||

ಶರಣ ರಕ್ಷಕ ಪಂಚಾಕ್ಷರ ಪೂಜಿತ
ಢಮರುನಿನಾದ ಪರಮಹರ್ಷಿತ
ಶಾಂಭವಿಪ್ರೀಯ ಸ್ಮಶಾನ ವಾಸಿ
ಉಗ್ರರೂಪಿ ಹರ ಗಣೇಶಪಿತ||೨||

ಸಕಲಪಾಪಹರಣ ಉರಗಧಾರಣ
ತಮಹಾರಕ ಸಾಮಗಾನ ಈಶ್ವರ
ನಿರ್ವಿಕಾರ ಉಮಾಮನೋಹರ
ವಿಶ್ವೋದ್ಧಾರಕ ಶರಣು ಶಂಕರ||೩||

✍️... ಅನಿತಾ ಜಿ.ಕೆ.ಭಟ್.

No comments:

Post a Comment