Monday, 7 March 2022

ಮಹಿಳಾ ಶಕ್ತಿ

 


#ಮಹಿಳಾ ಶಕ್ತಿ

ಸಹನೆಯಲಿ ಇಳೆಯಾಗಿ ಕಷ್ಟದಲಿ ಶಿಲೆಯಾಗಿ
ತನ್ನವರ ಕ್ಷೇಮಕೆ ತೇಯುವವಳು
ನೋವಿನಲಿ ಹೆಗಲಾಗಿ ‌ಸುಖದಲ್ಲಿ ಸಖಿಯಾಗಿ
ಸುತ್ತಲೂ ನಗೆಬಿಲ್ಲ ಹರಡುವವಳು||೧||

ಮಹಿಳೆಯವಳು... ಮಹಿಮೆಯವಳು..
ತ್ಯಾಗವವಳು.. ಪ್ರೇಮವವಳು...

ಬಳಲಿಕೆಯ ಬೇಗೆಯಲಿ ಮನದ ತೊಳಲಾಟದಲಿ
ನೆರಳಾಗಿ ಕೊರಳಾಗಿ ತಬ್ಬುವವಳು
ತರುವಿನಾಸರೆಯಿರಲು ಮೊಗ್ಗಾಗಿ ಹೂಬಿರಿದು
ಕಂಪೀವ ಲತೆಯಂತೆ ಹಬ್ಬುವವಳು||೨||

ತನ್ನತನವನು ಮರೆತು ಪರರ ಹಿತವನೆಬಯಸಿ
ದುಡಿವವಳ ತುಳಿಯದೆಯೆ ಸೇವೆಮಾಡಿ
ಮಹಿಳಾಶಕ್ತಿಯ ಪ್ರೀತಿತ್ಯಾಗಸಹನೆಯ ಸ್ಮರಿಸಿ
ಶ್ರೇಷ್ಠತೆಯನರಿತು ನಿತ್ಯ ಗೌರವವ ನೀಡಿ||೩||

ಮಹಿಳೆಯವಳು.. ಮಹಿಮೆಯವಳು..
ತ್ಯಾಗವವಳು.. ಪ್ರೇಮವವಳು..

✍️... ಅನಿತಾ ಜಿ.ಕೆ.ಭಟ್.
08-03-2022.
ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 💐


No comments:

Post a Comment