#ಮುನ್ನಡೆಸು ಸೋಮನಾಥೇಶ್ವರ
ಕರಮುಗಿದು ಬೇಡುವೆ ಕರುಣಿಸಿ ಕಾಯೋ
ಕರಗಿಸುತ ಕಷ್ಟಗಳ ಕರುಣಾಕರ
ವರಗಳನು ನೀಡೋ ಹರಹರ ಮಹದೇವ
ಹರಸುತಿರು ಅನುದಿನ ಪರಮೇಶ್ವರ||೧||
ತುಂಬೆಎಕ್ಕ ಬಿಲ್ವಪತ್ರೆಯ ಅರ್ಪಿಸುವೆ ನಿನಗೆ
ನಂಬಿ ನೀ ನಡೆಸೋ ಸಹಸ್ರಾಕ್ಷ
ತುಂಬಿಕೊಂಡಿಹ ತಮವನೆಲ್ಲ ನೀಗಿಸಿ ಬೆಳಗೆ
ಹಂಬಲಿಸಿಹೆ ದಯೆತೋರು ಫಾಲಾಕ್ಷ||೨||
ಸಂಕಟವನಳಿಸೋ ತವನಾಮವ ಧ್ಯಾನಿಸುವೆ
ಕಿಂಕರನ ಅನುಗ್ರಹಿಸು ಗುಣಸಾಂದ್ರ
ಅಂಕೆಯಿಲ್ಲದ ಮತಿಗೆ ಸತ್ಯಪಥವನೇ ತೋರೋ
ಶಂಕಿಸದೆ ಹರಸೈ ವೃಂದಾರಕೇಂದ್ರ||೩||
ಜಯ ಅಭಯಂಕರ ಜಯ ಶಿವಶಂಕರ
ಜಯ ದೇವೋತ್ತಮ ಶರಣರನು ಉದ್ಧರಿಸು
ಜಯ ನಂದಿವಾಹನ ಜಯ ಭೂತಭಾವನ
ಜಯ ಸೋಮನಾಥೇಶ್ವರ ನಿರತ ಮುನ್ನಡೆಸು||೪||
✍️... ಅನಿತಾ ಜಿ.ಕೆ.ಭಟ್.
01-03-2022.
No comments:
Post a Comment