ಒತ್ತಾಯ ಮಾಡೆಡ ಅಮ್ಮ...
ಅಮ್ಮಾ ಎನಗೀಗಲೆ ಮದುವೆ ಬೇಡ
ಅಪ್ಪಯ್ಯ ಕಾಲಿಗೆ ಬೀಳ್ತೆ ಆನೀಗ ಮದುವೆ ಆವ್ತಿಲ್ಲೆ..||
ರೂಪತ್ತೆಯನೋಡ್ಲೆ ಹದಿನೈದು ಮಾಣ್ಯಂಗ ಬೈಂದವಡ
ಉಪ್ಪಿಟ್ಟವಲಕ್ಕಿಕ್ಷೀರ ಗಮ್ಮತ್ತು ಹೊಡದ್ದವಡ
ಇಲ್ಲದ್ದ ಕೊರತೆ ಹುಡ್ಕಿ ಕೂಸು ಬೇಡ ಹೇಳಿದ್ದವಡ
ಅವ್ರ ಮಾಣಿಯ ಕೊರತೆ ಅವಕ್ಕೆ ಕಾಣ್ತೇ ಇಲ್ಲೆಡ||೧||
ಒತ್ತಾಯ ಮಾಡೆಡ ಅಮ್ಮ ಎನಗೀಗ ಮದುವೆ ಬೇಡ
ಅಪ್ಪಯ್ಯ ಕಾಲಿಗೆ ಬೀಳ್ತೆ ಆನೀಗ ಮದುವೆ ಆವ್ತಿಲ್ಲೆ||
ಆಚಮನೆ ಶಾರಕ್ಕನ ಮಗಳಿಂಗೆ ಮದುವೆ ಆಯಿದಲ್ದಾ
ಗೆಂಡನ ಮನೆಲಿ ಹತ್ತೆಕ್ರೆ ತೋಟ ಇದ್ದಡ
ಕೆಲಸಕ್ಕೆಲ್ಲಾ ಆಳುಕಾಳು ತುಂಬಾ ಇದ್ದವಡ
ಮಾವ ಮಾತ್ರ ಆಸ್ತಿಯೆಲ್ಲಾ ಪೇಟೆಲಿಪ್ಪ ಮಗಂಗೆ ಬರೆತ್ತೆ ಹೇಳ್ತನಡ
ಹುಳ್ಕುನ್ಯಾಯಂದ ಕೂಸಿಂಗೆ ನಿದ್ದೆ ಬತ್ತಿಲ್ಲೆಡ..
ನಿತ್ಯ ನಿದ್ದೆ ಬತ್ತಿಲ್ಲೆಡ||೨||
ಒತ್ತಾಯ ಮಾಡೆಡ ಅಮ್ಮ.. ಎನಗೀಗ ಮದುವೆ ಬೇಡ
ಕೃಷಿಕ ಮಾಣಿಯಂತೂ.. ಎನಗೆ ಬೇಡವೇ ಬೇಡ||
ಎನ್ನ ಫ್ರೆಂಡು ಸಹನಂಗೆ ಬೆಂಗ್ಳೂರ್ ಮಾಣಿ ಸಿಕ್ಕಿದ್ದ
ಕೈ ತುಂಬಾ ಕಾಂಚಾಣ ಅರಮನೇಲಿ ಮೆರೆಸಿದ್ದ
ಹಗಲು ಇರುಳು ಕೆಲಸ ಹೇಳಿ ಒದ್ದಾಡ್ತಾಡ
ಗಂಡಹೆಂಡ್ತಿ ಸರಿಬರದೆ ಡೈವೋರ್ಸ್ ಆಗ್ತವಡ
ಮನೆ ಹಣ ಮಕ್ಳು..ಎಲ್ಲಾ ಪಾಲು ಮಾಡ್ತ್ವಡಾ||೩||
ಒತ್ತಾಯ ಮಾಡೆಡ ಅಮ್ಮ.. ಎನಗೀಗ ಮದುವೆ ಬೇಡ
ಅಪ್ಪಯ್ಯ ಕಾಲಿಗೆ ಬೀಳ್ತೆ.. ಆನೀಗ ಮದುವೆ ಆವ್ತಿಲ್ಲೆ||
ಬೊಡ್ಡಿ ಸಂಧ್ಯಾ ಮದುವೆಯಾಗಿ ಕಡ್ಡಿಯಾಗ್ಹೋಯ್ದು
ಅತ್ತೆ ನಾದ್ನಿ ಕಾಟಕೊಟ್ಟು ಬದ್ಕೇ ಬರಡಾಯ್ದು
ಅಪ್ಪಮ್ಮನ ದೂರಿದ್ರಂತೂ ಕಿವುಡಿ ಆವ್ತಡ
ಎದುರಾಡಿದ್ರೆ ಗುರಿಯಿಸೋ ಗಂಡ ಅವ್ನಡ
ವರ್ಷಕ್ಕೊಂದ್ರಿ ಅಪ್ಪನ್ಮನೆಗೆ ಬಂದ್ರೆ ಹೆಚ್ಚಡ||೪||
ಇದರೆಲ್ಲ ನೋಡಿದ್ಮೇಲೆ... ಆನು ಮದುವೆ ಆವ್ತಿಲ್ಲೆ
ಅಪ್ಪಮ್ಮ ಇಲ್ಕೇಳಿ.. ಆನೀಗ ಮದುವೆ ಆವ್ತಿಲ್ಲೆ||
ಹತ್ತಾರು ಕಡೇಲಿ ಜಾತ್ಕ ಕೊಟ್ಟೆ ಅಪ್ಪಯ್ಯ
ಜಾತ್ಕ ಸರಿ ಇಲ್ಲೇಳಿ ಕೇಳಿ ಕೇಳಿ ಸಾಕಾತಪ್ಪಯ್ಯ
ಮಾಣಿ ಜಾತ್ಕಲ್ಲಿ ತೊಂದ್ರೆ ಗಿಂದ್ರೆ ಏನೂ ಇರ್ತಿಲ್ಯಾ
ಮಾಣಿಗುದೇ ಅಕ್ಕತಂಗಿ ಆರೂ ಇರ್ತವಿಲ್ಯಾ??||೫||
ಅಪ್ಪಮ್ಮ ಇಲ್ಕೇಳಿ... ಆನು ಮದುವೆ ಆವ್ತಿಲ್ಲೆ
ಆನ್ಯಾವ ಮಾಣೀಗೂ ಕಮ್ಮೀಯಿಲ್ಲೆ||
ಒಳ್ಳೆ ವಿದ್ಯೆ ಉದ್ಯೋಗ ಇದ್ದು ಅಷ್ಟೇ ಸಾಕೆನಗೆ
ನೆಮ್ಮದಿಂದ ಬದುಕ್ತಾ ಇರ್ತೆ ಕೆಲವರ್ಷ ಹೀಂಗೆ
ಅಪ್ಪಮ್ಮನ ಜವಾಬ್ದಾರಿ ಹೆಗಲಲ್ಹೊತ್ಗೊಂಡು
ಹಾಯಾಗಿರ್ತೆ ಎನ್ನಷ್ಟಕ್ಕೇ ದುಡ್ದು ತಿಂದ್ಗೊಂಡು||೬||
ಅಪ್ಪಮ್ಮ ಇಲ್ಕೇಳಿ... ಆನೀಗ ಮದುವೆ ಆವ್ತಿಲ್ಲೆ..
ಆನ್ಯಾವ ಮಾಣೀಗೂ ಕಮ್ಮೀಯಿಲ್ಲೆ...||
ಒತ್ತಾಯ ಮಾಡೆಡ ಅಮ್ಮ..
ಒತ್ತಾಯ ಮಾಡೆಡ ಅಮ್ಮ..
ಅಮ್ಮ ಎನಗೀಗಲೆ ಮದುವೆ ಬೇಡ..
ಅಪ್ಪಯ್ಯ ಕಾಲಿಗೆ ಬೀಳ್ತೆ ಆನೀಗ ಮದುವೆ ಆವ್ತಿಲ್ಲೆ..||
✍️... ಅನಿತಾ ಜಿ.ಕೆ.ಭಟ್.
#ಸಾಂದರ್ಭಿಕ ಚಿತ್ರ ಕೃಪೆ ಅಂತರ್ಜಾಲ.
#ವಿಶ್ವ ಮಾತೃಭಾಷೆಯ ದಿನ
#ಹವ್ಯಕ ಭಾಷಾ ಕವನ(ಎರಡು ವರ್ಷಗಳ ಹಿಂದೆ ಬರೆದಿಟ್ಟದ್ದು, ಇತ್ತೀಚೆಗೆ ಹಳೆ ಡೈರಿಯಲ್ಲಿ ಸಿಕ್ಕಿದ್ದು..)
#ಗಂಭೀರವಾಗಿ ಪರಿಗಣಿಸದಿರಿ...
👌👌
ReplyDeleteThank you 🙏💐
Delete