Sunday, 26 July 2020

ನಿನ್ನ ಬಾಳಿಗೆ ನೀನೆ ಶಿಲ್ಪಿ





ನಿನ್ನ ಬಾಳಿಗೆ ನೀನೆ ಶಿಲ್ಪಿ

ನಡೆದಾಡುವ ಹಾದಿಯಲಿ
ಏರು ತಗ್ಗುಗಳಿಹುದು
ಕಡೆಗಣಿಸದೆ ಜತನದಲಿ
ಗುರಿಯ ಮುಟ್ಟುವ ಕನಸು ಕಾಣು||೧||

ಅಂಬರದ ಅಂಚಿನಲಿ ಸಂಭ್ರಮ
ಬೀಸಿದಂತೆ ಕಲ್ಲು ಹಿಟ್ಟು
ತುಂಬಿಹರಿದ ನದಿಯಸಂಗಮ
ಹಾಸಿಕೆನ್ನೀರ ಹುಡುಕಿ ನೆಲೆಗಟ್ಟು||೨||

ಖಾಲಿಪುಟದಂತೆ ಬದುಕಿಹುದು
ಗೀಚುವ ಕವಿಯು ನೀನಾಗು
ಬೇಲಿಯಿರದ ಶರಧಿಯದು
ಬಾಚಿಕೋ ಜಯದ ಸೊಬಗು||೩||

ಮನವಿರಲಿ ಕಾರ್ಯದೊಳು ನೆಟ್ಟು
ಚಂಚಲತೆ ಸೋಕದಂತೆ
ದಿನರಾತ್ರಿ ಶ್ರಮನಿಯಮ ಬಿಗಿಯಿಟ್ಟು
ಹಚ್ಚುದಾರಿಗೆ ಬೆಳಕು ದೀಪದಂತೆ||೪||

ನಿನ್ನ ಬಾಳಿಗೆ ನೀನೆ ಶಿಲ್ಪಿಯಾಗು
ಉಳಿಪೆಟ್ಟು  ಸಹಿಸಿಯೇ ಮೂರ್ತಿ
ಚಿನ್ನಧನಕೂ ಮೀರಿ ಸಂಪನ್ನನಾಗು
ಕೇಳುವಂತೆ ಜಗದಗಲ ನಿನ್ನ ಕೀರ್ತಿ||೫||


✍️... ಅನಿತಾ ಜಿ.ಕೆ.ಭಟ್.
26-07-2020.
   





6 comments:

  1. ಶ್ರಮವಿಟ್ಟು ದಾರಿಗೆ ಬೆಳಗು ದೀಪ...

    ಚೆನ್ನಾಗಿದೆ...

    ReplyDelete
  2. ಅರ್ಥ ಪೂರ್ಣವಾಗಿದೆ 👌👌

    ReplyDelete