ಸತ್ಯನಾರಾಯಣ ಪೂಜೆಯ ಹಾಡು - ೨
ಪ್ರಸಾದ ಬೇಡುವ ಹಾಡು
ಸತ್ಯನಾರಾಯಣ ಪ್ರಸಾದವ|
ಕೊಡಿಸು ನಮಗೆ | ನಿತ್ಯ ದೀರ್ಘಾಯು ಸೌಖ್ಯವಾ|| ಪ||
ಕೊಡಿಸು ನಮಗೆ | ನಿತ್ಯ ದೀರ್ಘಾಯು ಸೌಖ್ಯವಾ|| ಪ||
ಸತ್ಯವೃಷ್ಣ ರಹಿತನಾ|ದಿತ್ಯಕೋಟಿ ಸುಪ್ರಕಾಶ|
ದೈತ್ಯನಾಶ ಇಂದಿರೇಶ |ಶಕ್ತಿ ಯುಕ್ತಿ ಭಕ್ತಿ ಮುಕ್ತಿ
|| ಅ. ಪ||
ದೈತ್ಯನಾಶ ಇಂದಿರೇಶ |ಶಕ್ತಿ ಯುಕ್ತಿ ಭಕ್ತಿ ಮುಕ್ತಿ
|| ಅ. ಪ||
ಆದಿ ಮಧ್ಯಾಂತ ರಹಿತನೇ| ನಿನ್ನ ಕಥೆಯ ಓದಿ ಕೇಳಿ ಮಾಡ್ವೆ ಪ್ರಾರ್ಥನೆ|
ಗೋಧಿ ಕ್ಷೀರ ಶರ್ಕರಾ |
ಘೃತ್ಯಾದಿ ಬಾಳೆಹಣ್ಣುಗಳಾ |
ಸಪಾದ ಭಕ್ಷ್ಯಗಳನು
ಮಾಡಿ ಮೋದದಿಂದ ಅರ್ಪಿಸುವೆನು||೧||
ಗೋಧಿ ಕ್ಷೀರ ಶರ್ಕರಾ |
ಘೃತ್ಯಾದಿ ಬಾಳೆಹಣ್ಣುಗಳಾ |
ಸಪಾದ ಭಕ್ಷ್ಯಗಳನು
ಮಾಡಿ ಮೋದದಿಂದ ಅರ್ಪಿಸುವೆನು||೧||
ನಿದ್ರೆ ಜಾಗ್ರ ಸ್ವಪ್ನ ಮಿತ್ರೆಯಾ|
ಎನ್ನ ದಾರಿದ್ರ್ಯ ನಾಶ ಮಾಡು ಚಿನ್ಮಯಾ|
ಖದ್ರು ಪುತ್ರ ಶಯನ ಸಾ|ಮುದ್ರ ನಾಗಿ ಮೆರೆವ ದೇವ|
ಭದ್ರವಾಗಿರೂವ ಶ್ರೀ ರುದ್ರ ಮಿತ್ರ ಕಮಲನೇತ್ರ||೨||
ಎನ್ನ ದಾರಿದ್ರ್ಯ ನಾಶ ಮಾಡು ಚಿನ್ಮಯಾ|
ಖದ್ರು ಪುತ್ರ ಶಯನ ಸಾ|ಮುದ್ರ ನಾಗಿ ಮೆರೆವ ದೇವ|
ಭದ್ರವಾಗಿರೂವ ಶ್ರೀ ರುದ್ರ ಮಿತ್ರ ಕಮಲನೇತ್ರ||೨||
ಕಂತು ಜನಕ ರಕ್ಷಿಸೆನ್ನಯಾ | ಸಕಲ ಸೌಭಾಗ್ಯ ಸಂತತಿಯ ಕೊಡು ಜಗನ್ಮಯಾ|
ಅಂತರಹಿತನಾದ ವೇ|ದಾಂತ ಸುರನಿವಾಸ ಶ್ರೀ|ಕಾಂತ ವಿಷ್ಣುಮೂರ್ತಿಯೇ |ಏಕಾಂತದಿಂದ ವಂದಿಸುವೆನು||೩||
ಅಂತರಹಿತನಾದ ವೇ|ದಾಂತ ಸುರನಿವಾಸ ಶ್ರೀ|ಕಾಂತ ವಿಷ್ಣುಮೂರ್ತಿಯೇ |ಏಕಾಂತದಿಂದ ವಂದಿಸುವೆನು||೩||
- ಸಂಗ್ರಹ
ಬೇಡಿದ ಭಕ್ತಗೆ ಇಷ್ಟಾರ್ಥಗಳನ್ನು ಕರುಣಿಸುವ ದೇವ ಸತ್ಯನಾರಾಯಣ.ಕರಾವಳಿ ಭಾಗದ ಹವ್ಯಕರಲ್ಲಿ ಸತ್ಯನಾರಾಯಣ ದೇವರ ಪೂಜೆಯನ್ನು ಪುರೋಹಿತರು ಮಂತ್ರೋಚ್ಛಾರಣೆಯ ಮೂಲಕ ನೆರವೇರಿಸಿದಾಗ ಹೆಂಗಳೆಯರು ಹಾಡಿನ ಮೂಲಕ ಸತ್ಯನಾರಾಯಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ.ಇಂತಹ ಹಾಡುಗಳ ರಚನೆಕಾರರು ಯಾರು ಎಂಬುದು ತಿಳಿಯದಿದ್ದರೂ ಓಲೆಗರಿಗಳಲ್ಲಿ ನಮೂದಾಗಿ,ಒಬ್ಬರಿಂದ ಇನ್ನೊಬ್ಬರು ಕಲಿತು ಹಾಡನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದರು.ಪುಸ್ತಕಗಳ ಬಳಕೆ ಆರಂಭವಾದಾಗ ಹಲವರು ಹಸ್ತಪ್ರತಿ ಮಾಡಿಟ್ಟುಕೊಂಡರು.ಹೀಗೆ ಪಸರಿಸಿದಾಗ ಒಂದೇ ಹಾಡಿನಲ್ಲಿ ಹಲವಾರು ಬದಲಾವಣೆಗಳಾದವು ಉಚ್ಛಾರಣೆ, ಅಲ್ಪಪ್ರಾಣ ಮಹಾಪ್ರಾಣ, ಪದಪ್ರಯೋಗ.. ಇತ್ಯಾದಿ.ನನಗೆ ದೊರೆತ ಹಸ್ತಪ್ರತಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವಷ್ಟು ಜ್ಞಾನ ನನಗಿಲ್ಲ.ನನಗೆ ತಿಳಿದಿರುವ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೇನಾದರೂ ಬದಲಾವಣೆ ಮಾಡಬೇಕೆಂದು ಕಂಡುಬಂದಲ್ಲಿ ತಿಳಿಸಬಹುದು.
✍️... ಅನಿತಾ ಜಿ.ಕೆ.ಭಟ್.
24-07-2020.
********
🙏🙏💐
ReplyDelete💐🙏
Delete