ಸತ್ಯನಾರಾಯಣ ಪೂಜೆಯ ಹಾಡು-೩
ಸತ್ಯನಾರಾಯಣ ಪ್ರಸಾದವಾ ಕೊಡಿಸೊ ನಮಗೆ
ನಿತ್ಯ ದೀರ್ಘಾಯು ಸೌಖ್ಯವಾ ಮತ್ತು ತೀರ್ಥ ಪ್ರಸಾದವಾ ಕೊಡಿಸೊ ನಮಗೆ
ಉತ್ತಮದ ಸಪಾದ ಭಕ್ಷ್ಯವಾ
ಅತ್ಯಧಿಕವಾದ ಪಾದವಾ ನಂಬಿಪೂಜೆ ಭಕ್ತಿಯಿಂದ ಮಾಳ್ಪೆ ಮಾಧವಾ
ಸತ್ಯ ವೈಷ್ಣ ರಹಿತನಾದಿತ್ಯ
ಕೋಟಿ ಸುಪ್ರಕಾಶ
ದೈತ್ಯನಾಶ ಇಂದಿರೇಶ ಶಕ್ತಿ ಭಕ್ತಿ ಮುಕ್ತಿ||ಸತ್ಯ||
ಆದಿಮಧ್ಯಂತ ರಹಿತನೇ ನಿಮ್ಮ ಕಥೆಯ
ಓದಿ ಕೇಳಿ ಮಾಡ್ವೆ ಪ್ರಾರ್ಥನೆ ಆಲಿಸುವ ಜನರು ಸುಮ್ಮನೇ ತಮ್ಮ ಮರಣ
ಹಾದಿಯನ್ನು ನೋಡಲಾತನೇ
ಗೋಧಿ ಕ್ಷೀರ ಶರ್ಕರಘೃತಾದಿ ಬಾಳೆ ಹಣ್ಣುಗಳನು ಸ-
ಪಾದಭಕ್ಷ್ಯ ಮಾಡಿ ನಿಮಗೆ
ಮೋದದಿಂದ ಒಪ್ಪಿಸುವೆನು||ಸತ್ಯ||
ವೃದ್ಧ ಮಿತ್ರರನ್ನು ಪೊರೆದೆಯಾ ಕ್ಷತ್ರಿ ವೈಶ್ಯ
ಶೂದ್ರರನ್ನು ಪೊರೆದೆಯಾ
ನಿದ್ರೆ ಜಾಗ್ರ ಸ್ವಪ್ನಮಿತ್ರಯಾ ಎನ್ನ ದಾ-
ರಿದ್ರ್ಯವಾ ನಾಶಮಾಡೆ ಚೆಲುವಯಾ
ಕದ್ರುಪುತ್ರ ಶಯನ ಸಾಮೋದವಾಗಿ
ಇರುವ ದೇವ ಭದ್ರವಾಗಿ ಇರುವ ಶ್ರೀ
ರುದ್ರ ಮಿತ್ರ ಕಮಲ ನೇತ್ರ||ಸತ್ಯ||
ಕವಿತೆ ವನಿತೆ ಸಕಲ ಭಾಗ್ಯವೂ ಕನಿಂದ
ಭವನಿ ಭಟ್ಟು ಬರಲು ಅಯೋಗ್ಯವೂ
ಅವನಿ ನೆವನದಲ್ಲಿ ಪಾಂ-
ಡವರ ಪಕ್ಷ ನಿಂತು ಕೌ-
ರವರ ಸೋಲಿಸಿ ದಂತಲಿರುವ
ಪವನಜಾಕ್ಷ ಇತ್ಯಪ್ರಷ್ಠಿ ||ಸತ್ಯ||
ಅಂತು ಇಂತೆಂಬ ಮಹಿಮೆಯಾ ಪೊಗಳೆಲಾ
ಸಂತರಂಗ ಸಾಧ್ಯನಿರ್ಣಯಾ
ಕಂತು ಜನಕ ರಕ್ಷಿಸೆಮ್ಮಯಾ ಸಕಲಭಾಗ್ಯ
ಸಂತತಿಯ ಕೊಡಿ ಜಗನ್ಮಯ
ಅಂತ ರಹಿತನಾದ ವೇದಾಂತಪುರ ನಿವಾಸ ಶ್ರೀ
ಕಾಂತ ವಿಷ್ಣುಮೂರ್ತಿ ಏಕಾಂತದಲ್ಲಿ ವಂದಿಸುವೆನು||ಸತ್ಯ||
-ಸಂಗ್ರಹ
ಬೇಡಿದ ಭಕ್ತಗೆ ಇಷ್ಟಾರ್ಥಗಳನ್ನು ಕರುಣಿಸುವ ದೇವ ಸತ್ಯನಾರಾಯಣ.ಕರಾವಳಿ ಭಾಗದ ಹವ್ಯಕರಲ್ಲಿ ಸತ್ಯನಾರಾಯಣ ದೇವರ ಪೂಜೆಯನ್ನು ಪುರೋಹಿತರು ಮಂತ್ರೋಚ್ಛಾರಣೆಯ ಮೂಲಕ ನೆರವೇರಿಸಿದಾಗ ಹೆಂಗಳೆಯರು ಹಾಡಿನ ಮೂಲಕ ಸತ್ಯನಾರಾಯಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ.ಇಂತಹ ಹಾಡುಗಳ ರಚನೆಕಾರರು ಯಾರು ಎಂಬುದು ತಿಳಿಯದಿದ್ದರೂ ಓಲೆಗರಿಗಳಲ್ಲಿ ನಮೂದಾಗಿ,ಒಬ್ಬರಿಂದ ಇನ್ನೊಬ್ಬರು ಕಲಿತು ಹಾಡನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದರು.ಪುಸ್ತಕಗಳ ಬಳಕೆ ಆರಂಭವಾದಾಗ ಹಲವರು ಹಸ್ತಪ್ರತಿ ಮಾಡಿಟ್ಟುಕೊಂಡರು.ಹೀಗೆ ಪಸರಿಸಿದಾಗ ಒಂದೇ ಹಾಡಿನಲ್ಲಿ ಹಲವಾರು ಬದಲಾವಣೆಗಳಾದವು ಉಚ್ಛಾರಣೆ, ಅಲ್ಪಪ್ರಾಣ ಮಹಾಪ್ರಾಣ, ಪದಪ್ರಯೋಗ.. ಇತ್ಯಾದಿ.ನನಗೆ ದೊರೆತ ಹಸ್ತಪ್ರತಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವಷ್ಟು ಜ್ಞಾನ ನನಗಿಲ್ಲ.ನನಗೆ ತಿಳಿದಿರುವ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೇನಾದರೂ ಬದಲಾವಣೆ ಮಾಡಬೇಕೆಂದು ಕಂಡುಬಂದಲ್ಲಿ ತಿಳಿಸಬಹುದು.
-ಅನಿತಾ ಜಿ.ಕೆ.ಭಟ್.
31-07-2020.
🙏🙏🙏💐
ReplyDelete🙏🙏
Delete