ಸತ್ಯನಾರಾಯಣ ದೇವರ ಹೂ ಬೇಡುವ ಹಾಡು-೪
ಸತ್ಯದೇವ ಕೊಡಿಪ್ರಸಾದವಾ|
ಮುಡಿಯೊಳೆಸೆವ|
ಪತ್ರ ಪುಷ್ಪ ಬಳಿಕ ದ್ರವ್ಯವಾ||ಪಲ್ಲ||
ಭುವನ ಸೇವ್ಯ ನಿಮ್ಮ ಪಾದವಾ|ಚಿತ್ತದೊಳಗೆ
ಕವಲು ಮನವ ಬಿಟ್ಟು ಭಜಿಸುವಾ|
ಭುವನ ಜನರಿಗೊಲಿದು ದಯದಿ|
ಭುವನ ಸಿಂಧುವನ್ನೆಗೆಲಿದ|
ತವಕದಿಂದ ಸ್ತಿರವದಾದ
ಭುವನವೀವ ಸತ್ಯಮೀಶಾ||೧||
ಆದಿ ಭೂತ ವಿಶ್ವವಂದ್ಯನೇ|ಸುಪರ್ಣ ದ್ವಿಜನೆ
ವೇದವೇದ್ಯ ದೇವದೇವನೇ|
ಮೇಧಿನೀಶ ಧೃವನಿಗೊಲಿದ|
ಆದಿಮೂರ್ತಿ ಸತ್ಯದೇವ|
ಪಾದನೆನೆವ ಭಕ್ತರಿಗೆ|ಸ-
ಪಾದ ಭಕ್ಷ್ಯ ಸಹಿತ ದಯದೀ||೨||
ಕರದಿ ಶಂಖ ಚಕ್ರ ಪದ್ಮವಾ|ಗದೆಯು ಸಹಿತ|
ಧರಿಸಿ ನೆನೆವ ಭಕ್ತರಿಷ್ಟವಾ|
ಕರುಣಿಸುತ್ತ ರಾತ್ರಿ ಚರರ|
ದುರುಳವಂಶ ಕುಲಕುಠಾರ|
ಕೊರಳೊಳೊಳ್ವೈ ಜಯಂತಿ ಮಾಲೆ|
ಧರಿಸಿರೂವ ಹರಿಯೆ ದಯದಿ||೩||
ಬಡದರಿದ್ರನಾದ ವಿಪ್ರಗೇ|ಕಟಾಕ್ಷದೋರಿ|
ನುಡಿಸೆ ಸತ್ಯ|ವ್ರತವ ನಾಥಗೇ|
ಒಡನೆ ಭಕ್ತಿಯಿಂದ ಮಾಡಿ|
ಆಡಿಸಿರೂವ ಕಷ್ಟವೆಲ್ಲ|
ಕೆಡಿಸಿ ಸಿರಿ ಸಂಪನ್ನನಾದ
ಕಡೆಗೆ ಮುಕ್ತಿ ಕರುಣಿಸೀರ್ಪಾ||೪||
ಕಾಷ್ಟ ವಿಕ್ರೈಸಿ ಜೀವಿಸುವಗೇ|ಕ-
ಟಾಕ್ಷದೋರಿ|ಸಲಹಿದಂತ ಸತ್ಯದೇವನೇ|
ರಕ್ಷಿಸೆಂದು ನಿಮ್ಮ ಪಾದ|ನಚ್ಚಿದಂತ ಭಕ್ತರೀಗೆ
ನಿಕ್ಷಯಾದಿ ಪಾಲಿಸಯ್ಯ|
ಕಸ್ತುರಿಯಾ ಮಲ್ಲಿಗೆಯಾ||೫||
ಆ ಮಹೀಜಿತಾಖ್ಯ ಭೂಪನೂ|ಅಪುತ್ರನಾಗಿ|
ತಾ ಮನದೊಳು ಚಿಂತೆ ತಾಳ್ದನೂ|
ರೋಮಷನೊಳು ಕೇಳಿ ಪ್ರಜೆಯ|
ಭೂಮಿಪಾಲ ಸತ್ಯವ್ರತವ|
ಪ್ರೇಮದಿಂದ ಗೈಯಲವಗೆ|
ಕಾಮಿತಾರ್ಥ ಕರುಣಿಸೀರ್ಪಾ||೬||
ಸಾಧುವೆಂಬ ವೈಶ್ಯ ಗರ್ವದೀ|ಮುರಾರಿ ನಿಮ್ಮ|
ಪಾದ ಕಮಲ ಮರೆತು ಪೂರ್ವದೀ|
ಆದಿಯೊಳಗೆ ಸೆರೆಯ ಸಿಲುಕಿ|
ಮೇಧಿನೀಯೊಳ್ದುಃಖಪಟ್ಟು|
ಮಾಧವಾ ನೀ ರಕ್ಷಿಸೆನಲು|
ಭೇದವಿಡದೆ ಕಾಯ್ದ ಹರಿಯೇ||೭||
ಸತಿ ಕಲಾವತಿಯು ಪ್ರಸಾದವಾ|ಬಿಡಲಿಕವಳ|
ಪತಿಯನಡಗಿ|ಸಲ್ಕೆಶೋಕವಾ|
ಅತಿಶಯದಲಿ ತಾಳ್ದು ನಿಮ್ಮ-
ನುತಿಸಿ|ಮರತಿಂದು ಬಂದ
ಸತಿಗೆ ಪತಿಯ|ತೋರಿವಲಿ|
ಶತದಳಾಯತಾಕ್ಷ ಮುದದೀ||೮||
ಧರಣಿಪಾಲ ರಾಮಚಂದ್ರನೂ|ಪಂಚವಟಿಯೊ-
ಳಿರಲು ಖಳನು ಕದ್ದು ಸಖಿಯನೂ|
ಭರದಿಕೊಂಡು ಪೋಗಲವಳ|
ನರಸಿ ಬರುತ ಶರಧಿಗಾಗಿ|
ಪರಮಪುರಷ ನಿಮ್ಮನುತಿಸೆ|
ಪೊರೆದಕರುಣ ಶರಧಿ ದಯದೀ||೯||
ತ್ರಿದಶವಂದ್ಯ ರಾಮಚಂದ್ರನೂ|ಕಂಸಾರಿಯಾದ|
ಮಧುವಿಲಾಸ ಕೃಷ್ಣದೇವನೂ|
ಚದುರಬೌದ್ಧ ಕಲ್ಕ್ಯ ರೂಪ|
ಮುದದಿ ರಕ್ಷಿಸಲಿ ನಮ್ಮ|
ಯದುಕುಲಾಬ್ಧಿ ತುಹಿನ ಲಕ್ಷ್ಮಿ|ರಮಣ ನೀ
ಕಟಾಕ್ಷದೋರೀ||೧೦||
ಜಯತು ಮತ್ಸ್ಯ ರೂಪದೇವನೇ| ಕೂರ್ಮಾವತಾರ|
ಜಯ ನಮೋ ವರಾಹ ದೇವನೇ |
ಜಯ ನಮೋಸ್ತು ನಾರಸಿಂಹ|
ಜಯನಮೋಸ್ತು ವಿಕ್ರಮಾಖ್ಯ|
ಜಯನಮೋಸ್ತುಭೃಗುಕುಲೇಂದ್ರ|
ಹರಿಯೆ ನೀ ಕಟಾಕ್ಷದೋರೀ||೧೧||
ಸತ್ಯದೇವ ಕೊಡಿ ಪ್ರಸಾದವಾ|
ಮುಡಿಯೊಳೆಸೆವ|
ಪತ್ರಪುಷ್ಪ ಬಳಿಕ ದ್ರವ್ಯವಾ||
-ಸಂಗ್ರಹ
- ಅನಿತಾ ಜಿ.ಕೆ.ಭಟ್.
01-08-2020.
🙏🙏🙏💐
ReplyDelete🙏💐 ಧನ್ಯವಾದಗಳು..
Delete