ಆರತಿ ಬೆಳಾಗಿರೇ |ಸತ್ಯದೇವೇಶಗೇ|
ಘೋರತರದ ಸಂಸಾರಾಂಭೋನಿಧಿ|
ಕಾರಣ ಧೀರಗೆ ಸಾರಸ ರೂಪದಾ||೧||
ಕಾಶಿಯಾ ಪುರದಿಹ |ರಮ್ಯ ವಿಪ್ರೋತ್ತಮ-
ಗೆ ಶ್ರೀ ಪ್ರಭು ಸುರವೃದ್ಧ|ರೂಪದಿ ವ್ರತವುಪ
ದೇಶಿಸೆಚರಿಸಲು |ಲೇಸಪಾಲಿಸಿದಗೇ||೨||
ಆ ವಿಪ್ರನಿಂದಾ ವ್ರತವಾ |ಕಷ್ಟ ವಿಕೃತ ಪಡದೂ|
ಭಾವದಿಂದಲಿತಾ|ವ್ರತವಾಚರಿಸಲು|
ಜೀವನ ಸುಖವಿತ್ತ ದೇವಗೆ ಹೂವಿನಾ||೩||
ಸಾಧು ಸಾವ್ಕಾರಾ ವ್ರತಕೇ|
ಆದಿ ನಾಲ್ಕಾಮುಖಾ ನೃಪನೂ|
ಬೋಧನೆಯಿಂದ ವಿನೋದದಿ ಪ್ರಾರ್ಥಿಸೆ|
ಭೇದಿಸೀದಾತಗೆ ಬಾಧೆಯನಿತ್ತಗೇ||೪||
ಆ ಮುನಿಪೇಳಿದಂತೇ |ಸತ್ಯ ದೇವನಾರ್ಚಿಸಲೂ|
ಕಾರಣ ದುರಿತನಿವಾರಣ ರಿಪುಕುಲ|ಮಾರಣ
ದುಃಖ ನಿವಾರಣ ಶೌರಿಗೇ||೫||
ಪರಿಪರಿಕಷ್ಟಗಳಾಬರಿಸುತಾ ಸಾಧುಗೇ| ಪರಿಭಾವಿಸುತಾವರಯತಿ ಯಾಗಿತ |
ಸ್ಮರಿಸಿಪೂಜಿಸಿ ನಿತ್ಯ|
ಪುರದಗೆ ರುಚಿರದ||೬||
ಮತ್ತಂಗದ ಜನೃಪನೂ|
ಸತ್ಯಪ್ರಸಾದ ಬಿಡಲೂ|
ಪುತ್ರವನಾದಿವಿ ಪಂಕ್ತೀಕಕ್ಷವ|
ನರ್ತು ಪೂಜಿಸಿ ಸರ್ವಾದಗಳಿತ್ತಗೇ||೭||
ರಾಘವ ರಾಮನೂ
ಸೀತೆಯ ತರಲೆಂದು
ಸಾಗರ ತಡಿಗೆ ತಪೋಗಿತ ವಿಸ್ಮಯ
ನಾಗಲನುಜೆಯಿಂದ ಪೇಳಿಸಿದವನಿಗೇ||೮||
ಏಕತನೇಕ ರೂಪ |ಶ್ರೀಕರ ಜ್ಞಾನದಿ |
ಪಾಪಕ ಶಾಸನ ಮುಖ್ಯರಕೇಶಾ|
ರ್ದೀಕ ಶ್ರೀಕರ ರೂಪಗ
ನೇಕರದೊಳಿಪ್ಪಾ||೯||
ಜಯ ಜಯ ಮಂಗಲಂ|
ಸತ್ಯನಾರಾಯಣಗೇ|
ಜಯಪುಣುಜೇಶ್ವರಿ| ದಯವನು ಪಡೆಯುತ|
ಜಯ ಭವ ಭಯ ಹರ|
ಜಯವೆಂದು ಮಂಗಲಂ||೧೦||
-ಸಂಗ್ರಹ
-ಅನಿತಾ ಜಿ.ಕೆ.ಭಟ್.
02-08-2020.
🙏🙏🙏💐
ReplyDelete💐🙏 ಧನ್ಯವಾದಗಳು.
Delete