Thursday, 6 August 2020

ಜಾಜಿಯ ಘಮ










 ಶ್ರಾವಣ ಮಾಸದಲಿ
ಜಾಜಿಯ ಘಮಘಮ...
          ಹಬ್ಬಗಳ ಸಂಭ್ರಮಕೆ
            ಹೆಚ್ಚಿಸುತ ಮೆರುಗು...
ಮುಸ್ಸಂಜೆಯಲಿ ಕಂಪನು
ಪಸರಿಸಿ ನಗುವ ಸುಮ...
         ಸೇರುತ ದೇವರ ಪಾದಕೂ 
         ರಮಣಿಯ ಮುಡಿಗು...
ಜಾಜಿಯ ಸೌಗಂಧಕೆ
ಬೇರಿಲ್ಲ ಸರಿಸಮ ...!!

✍️... ಅನಿತಾ ಜಿ.ಕೆ.ಭಟ್.
29-07-2020.

2 comments: