Tuesday, 18 August 2020

ಬಂದನೋ ಬಂದನು.. ಮನೆಗೆ ಗಣಪ ಬಂದನು

 

        ಗಣಪ ಬಂದನು

ಬಂದನೋ ಬಂದನು
ಮನೆಗೆ ಗಣಪ ಬಂದನು
ತಂದನೋ ತಂದನು
ನಮ್ಮ ಮನಕೆ ಮುದವನು...ನಮ್ಮ ಮನಕೆ ಮುದವನು...||೧||

ಹೊಳೆಯುವ ಬೆಳ್ಳಿಯ
ಡೊಳ್ಳುಹೊಟ್ಟೆ ಗಣಪನು
ಕೆಳಗಿಹ ಪಿಳ್ಳೆಯ
ಮೂಷಿಕವೇ ವಾಹನವು....ಮೂಷಿಕವೇ ವಾಹನವು...||೨||

ಅಂದದಿಂದ ಬಾಲರೆಲ್ಲ
ಅಲಂಕಾರ ಮಾಡಬಂದರು
ಚೆಂದದೊಂದು ಚೆಂಡು ಮಾಲೆ
ಕೊಂಡು ತಂದರು...ಕೊಂಡು ತಂದರು...||೩||

ಚಡ್ಡಿತೊಡುವ ಪುಟ್ಟ ಪೋರ
ಮುಂಡು ತೊಟ್ಟನು
ಅಡ್ಡಿಯಿಲ್ಲ ಪುರೋಹಿತನು
ನಾನೇ ಎಂದನು...ನಾನೇ ಎಂದನು...||೪||

ಬಾಲಗಣಪಗೆ ಹಾರವನ್ನು
ಅಲಂಕರಿಸೆ ಎತ್ತಿಹಿಡಿದರು
ಸಾಲುನಿಂತು ಸಿಕ್ಕು ಬಿಡಿಸೆ
ಕಂಠಕೆ ತೊಟ್ಟರು...ಕಂಠಕೆ ತೊಟ್ಟರು...||೫||

ಗರಿಕೆ ಪತ್ರೆ ಹೂಗಳನ್ನು
ಕರದಿ ಅರ್ಪಿಸಿ
ತರತರದ ನೈವೇದ್ಯವನ್ನು
ಗಣಪಗೆ ಒಪ್ಪಿಸಿ..ಗಣಪಗೆ ಒಪ್ಪಿಸಿ...||೬||

ಜಯಗಣಪ ಜಯಗಣಪ
ಜಯವಿನಾಯಕ
ಜಯಗಣಪ ಜಯಗಣಪ
ಅಭಯದಾಯಕ...ಬಾಲರಕ್ಷಕ....||೭||

ಊರಕೇರಿಯ ತರಳರೆಲ್ಲ
ಕರವ ಜೋಡಿಸಿ
ಮೊರೆಯಿಟ್ಟರು ವಿದ್ಯಾ
ಬುದ್ಧಿ ಕೊಟ್ಟು ರಕ್ಷಿಸು... ವಿದ್ಯಾ ಬುದ್ಧಿ ಕೊಟ್ಟು ರಕ್ಷಿಸು...||೮||

✍️... ಅನಿತಾ ಜಿ.ಕೆ.ಭಟ್.
19-08-2020.

ಚಿತ್ರ ಕೃಪೆ :ಕನ್ನಡ ಕಥಾಗುಚ್ಛ.

ಈ ಹಾಡನ್ನು ಯೂಟ್ಯೂಬ್ ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿ..https://youtu.be/vE241KG_OC0

1 comment: