ವಿನಾಯಕ...ಅಭಯದಾಯಕ..
ವಿನಾಯಕ ...ಅಭಯದಾಯಕ...
ಮಹಿಮಾಪೂರ್ಣಾ..ಶರಣು..ಕರುಣಾ..||ಪ||
ಗೌರಿಯ ಕಂದ ವರಗಳ ಸುರಿವನೇ
ಹಂಸಗ್ರೀವ ಅಗ್ರಗಾಮಿನಿಯೇ
ಅಭೀಷ್ಟವರದ ಸನ್ಮಂಗಲನೇ
ವಿಷ್ಣುಪ್ರಿಯ ಮಹಾಗಣಪತಿಯೇ||೧||
ದ್ವಿಮುಖ ರೂಪ ಸುಖಾನಿಧಿಯೇ
ಮೋದಕಪ್ರಿಯ ಭಕ್ತನಿಧಿಯೇ
ಸಂತತ ಭಜಿಪೆ ಪಂಚಹಸ್ತನೇ
ದೂರ್ವಪೂಜಿತ ದುರಿತಹರನೇ||೨||
ಪಾರ್ವತಿನಂದನ ನಿತ್ಯವಂದ್ಯನೇ
ವಿದ್ಯಾಬುದ್ಧಿಪ್ರದಾಯಕ ವಾಕ್ಪತಿಯೇ
ಕಡುಬು ಕಜ್ಜಾಯಾರ್ಪಿತ ಶಿವಪ್ರಿಯನೇ
ಪ್ರಥಮಪೂಜಿತ ಸುಪ್ರದೀಪನೇ||೩||
ಕನಕ ಕಿರೀಟಧಾರಿ ವಿಶ್ವನೇತ್ರನೇ
ಮಹೋದರ ಸತ್ಯತತ್ವಸೂತ್ರನೇ
ಆಶ್ರಿತವತ್ಸಲ ಸುರಪೂಜಿತನೇ
ಸಂಕಟನಾಶ ವರಗಜತೇಜನೇ||೪||
✍️... ಅನಿತಾ ಜಿ.ಕೆ.ಭಟ್.
22-08-2020.
ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳು .💐
ಚಿತ್ರ ಕೃಪೆ: ಅಂತರ್ಜಾಲ.
💐💐🙏
ReplyDeleteಧನ್ಯವಾದಗಳು 💐🙏
Delete