Friday, 14 August 2020

ಸ್ವಾತಂತ್ರ್ಯದ ಹೆಮ್ಮರ

 

ಸ್ವಾತಂತ್ರ್ಯದ ಹೆಮ್ಮರ

ಭರದಿ ಏರಿ ನಭದಿ ತೇಲಿ
ಕಂಗೊಳಿಸುವ ಪತಾಕೆ
ಮೂರು ವರ್ಣ ನೀಲ ಚಕ್ರ
ಮೆರುಗು ನಮ್ಮ ದೇಶಕೆ||೧||

ಕೇಸರಿ ಬಿಳಿ ಹಸಿರು ವರ್ಣ
ತ್ಯಾಗ ಶಾಂತಿ ಸಮೃದ್ಧಿಯು
ಸ್ನೇಹ ಪ್ರೀತಿ ಐಕ್ಯತೆಯ
ನಡೆಯು ನಮ್ಮ ಹೆಮ್ಮೆಯು||೨||

ಪರರ ದಾಸ್ಯ ದಬ್ಬಾಳಿಕೆಗೆ
ನೀಡಿ ದಿಟ್ಟ ಉತ್ತರ
ದೇಶಭಕ್ತಿ ಶೌರ್ಯ ಮೆರೆದು
ಗೆಲಿದ ಸ್ವಾತಂತ್ರ್ಯದ ಹೆಮ್ಮರ||೩||

ದೇಶಕಾಗಿ ಹಗಲಿರುಳು
ಮಹಾತ್ಮರ ಬಲಿದಾನ
ಸತ್ಯಧರ್ಮ ಅಹಿಂಸೆ
ದೇಶಭಕ್ತಿಯ ಗುಣಗಾನ||೪||

ವೀರಕಲಿಗಳ ಪುಣ್ಯ ಪುರುಷರ
ಮಡಿಲು ತಾಯಿ ಭಾರತಿ
ಲೋಕಕೆಲ್ಲ ಒಳಿತು ಬಯಸುವ
ಉದಾತ್ತ ನಿನ್ನ ಸಂಸ್ಕೃತಿ||೫||

ಜಾತಿಮತ ಭೇದ ಮರೆತು
ದೇಶವಿರಲಿ ಅಖಂಡ
ಸಕಲ ಕ್ಷೇತ್ರ ಸಾಧನೆ
ದಿಟ್ಟಿಸುವಂತೆ ಬ್ರಹ್ಮಾಂಡ||೬||

✍️... ಅನಿತಾ ಜಿ.ಕೆ.ಭಟ್.
15-08-2020.

 ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು 💐💐

ಚಿತ್ರ ಕೃಪೆ ಅಂತರ್ಜಾಲ..

No comments:

Post a Comment