Friday, 14 August 2020

ನಾವು ಭಾರತೀಯರು

 

      ನಾವು ಭಾರತೀಯರು

ನಾವು ಭಾರತೀಯರು
ಹೆಮ್ಮೆಯಿಂದ ಎದೆಯತಟ್ಟಿ ಹೇಳ್ವೆವು
ಪುಣ್ಯ ಪವಿತ್ರ ಭರತ ಭೂಮಿ
ಮಡಿಲು ನಮಗೆ ನಾಕವು||೧||

ಹಿಮದ ಮುಕುಟ ಹಸಿರಸೆರಗು
ಪದತಲದಲಿ ಮುತ್ತಿಕ್ಕುವ ಶರಧಿ
ಸಿರಿಫಲದ ಕಣಜ ಬಾಳ್ವ ಖಗಮೃಗಮನುಜ
ಪೊರೆದಿದೆ ತಾಯಿ ಭಾರತಿಯೊಡಲು ||೨||

ಆಚಾರ್ಯಸಂತರ ಪಾದ ಸೋಕಿದನಾಡು
ಪತಂಜಲಿ ವ್ಯಾಸವಾಲ್ಮೀಕಿಮಹರ್ಷಿಗಳ ಬೀಡು ಗಂಗೆ ತುಂಗೆ ಯಮುನೆ ಹರಿವ ನಾಡಿನಲಿ
ಜನುಮ ಪಡೆದ ನಾವು ಭಾರತೀಯರು||೩||

ನಡುಗುವ ಚಳಿಯಲಿ ಗಡಿಕಾವ ಯೋಧ
ಸೋಂಕು ತಡೆಗೆ ಸಜ್ಜಾಗಿಹ ದಾದಿ ವೈದ್ಯ
ನೇಗಿಲಯೋಗಿ ,ಹಲವಿಧ ಕರ್ಮಿಗಳ
ಒಕ್ಕೊರಲ ದನಿ ನಾವು ಭಾರತೀಯರು||೪||

ಜಾತಿಮತಗಳ ಭೇದವನಳಿಸಿ
ತಾಯ್ನೆಲದ ಸಂಸ್ಕೃತಿ ವೈಭವ ಮೆರೆಸುವ
ಪ್ರಕೃತಿ ಸಿರಿಯನು ಜತನದಿ ಉಳಿಸಿ
ಪ್ರೀತಿ ಶಾಂತಿಯ ದೀಪವ ಬೆಳಗುವ||೫||ನಾವು ಭಾರತೀಯರು||

✍️... ಅನಿತಾ ಜಿ.ಕೆ.ಭಟ್.
15-08-2020.

ಅಲ್ಲಮ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ ರಾಷ್ಟ್ರೀಯ ರಕ್ಷಾಬಂಧನ ಕವಿಗೋಷ್ಠಿ (ಆನ್ಲೈನ್)ಯಲ್ಲಿ ದತ್ತ ಶೀರ್ಷಿಕೆ 'ನಾವು ಭಾರತೀಯರು' -ಇದಕ್ಕಾಗಿ ಬರೆದು ವಾಚಿಸಿದ ಕವನ.https://youtu.be/n7dpo-3NWDg


No comments:

Post a Comment