Saturday, 1 August 2020

ಇರು...ನಕ್ಕು ಬಿಡುವೆ...



ಇರು...ನಕ್ಕು ಬಿಡುವೆ..

ಬಿಳಿಯ ಮುದ್ದು ಹಲ್ಲೆರಡು
ನನಗೆ ಮೂಡಿದೆ
ಚಕ್ಕುಲಿಯ ತಿನುವ
ಆಸೆ ಹೆಚ್ಚಿದೆ...

ಖಾರ ಕಡ್ಡಿ ಡಬ್ಬದಲ್ಲಿ
ತುಂಬ ತುಂಬಿದೆ
ಪುಟ್ಟ ತುಂಡು ತಿಂದು
ರುಚಿಯ ನೋಡಬೇಕಿದೆ...

ಹಬ್ಬದುಂಡೆಯೆಲ್ಲ ಸವಿದು
ಖಾಲಿಯಾಗಿ ಹೋಗಿದೆ
ಕೃಷ್ಣನ ಹಬ್ಬ ಬರುವ
ತನಕ ಕಾಯಬೇಕಿದೆ...

ಅಮ್ಮ ನೀನು ಎತ್ತಿಕೊಂಡು
ಎತ್ತ ಸಾಗುವೆ
ಚಿತ್ರ ತೆಗೆಯುತಿಹರು ನೋಡು
ಇರು, ನಕ್ಕು ಬಿಡುವೆ..

✍️... ಅನಿತಾ ಜಿ.ಕೆ.ಭಟ್.
02-08-2020.




2 comments: