ಪುಟ್ಟ ಮಲ್ಲಿ-ಶಿಶುಗೀತೆ
ಪುಟ್ಟ ಮಲ್ಲಿ ಕಣ್ಣುಮುಚ್ಚಿ
ನಿಂತಿರುವೆ ಏತಕೆ
ಹಸಿರು ಹಾಸು ನೀಲಬಾನು
ಸೆಳೆವ ನೋಟಕೆ...||೧||
ಪುಟ್ಟ ಮಲ್ಲಿಗೆರಡು ಜುಟ್ಟು
ದಿರಿಸು ಚೆಂದಿದೆ
ಧರಣಿದೇವಿ ವರುಣನೊಸಗೆ
ಹೀರಿ ಚಿಗುರಿದೆ...||೨||
ಆಡಲೆರಡು ಕುರಿಯ ಜೊತೆಗೆ
ದೊಡ್ಡ ಬಯಲಿದೆ
ಹಸಿದ ಹೊಟ್ಟೆ ಬಿಳಿಯ ಟಗರು
ಹುಲ್ಲು ಮೇದಿದೆ...||೩||
ನಿನ್ನ ನಲಿವು ನೋಡದೇನೆ
ಕರಿಕುರಿಯು ಖೇದಗೊಂಡಿದೆ
ಕರವ ಸರಿಸಿ ಸಂಗ ಬಯಸಿ
ಆಡಿ ಕುಣಿಯಬಾರದೆ...||೪||
ದಣಿಯೆ ನೀನು ಮರವು ತಾನು
ನೆಳಲನೀವುದು
ಮೋಡದಾಚೆ ರವಿಯು
ಅಡಗಿ ನೋಡುತಿರುವನು...||೫||
ಪುಟ್ಟ ಮಲ್ಲಿ ಬೇಡವಿಲ್ಲಿ
ಅಳುಕು ಅಂಜಿಕೆ
ಚಂದಮಾಮ ಬರುವನೀಗ
ತಾರೆ ತೋಟಕೆ...||೬||
ಬರಿಯ ಕಾಲು ಹುಲ್ಲು ಮುಳ್ಳು
ಮೆಟ್ಟಿ ಜಿಗಿಯಲಿ
ಅಮ್ಮ ಬರಲು ಕುರಿಯ ಕೂಡಿ
ಮನೆಗೆ ಸಾಗಲಿ...||೭||
ಪ್ರಾಣಿ ಪ್ರೀತಿ ಪೊರೆವ ರೀತಿ
ಮಲ್ಲಿ ತಿಳಿಯಲಿ
ನೆನಪ ಸಂಚಿ ತುಂಬಿಕೊಳಲಿ
ಬಾಳಬಯಲಲಿ...||೮||
✍️.. ಅನಿತಾ ಜಿ.ಕೆ.ಭಟ್.
19-08-2020.
ಚಿತ್ರ ಕೃಪೆ: ಕನ್ನಡ ಕಥಾಗುಚ್ಛ
ಈ ಗೀತೆಯನ್ನು ಯೂಟ್ಯೂಬ್ ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿಕೊಳ್ಳಬಹುದು.

👌👌
ReplyDeleteಧನ್ಯವಾದಗಳು 💐🙏
Deleteಸೂಪರ್
ReplyDeleteಧನ್ಯವಾದಗಳು 💐🙏
Deleteಸೂಪರ್
ReplyDeleteಧನ್ಯವಾದಗಳು 💐🙏
Deleteಸುಂದರವಾದ ಕವನ
ReplyDelete