Monday, 10 August 2020

ಮಹಾಮಹಿಮ ಶ್ರೀಕೃಷ್ಣ

 

ಮಹಾಮಹಿಮ ಶ್ರೀ ಕೃಷ್ಣ

ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಅಭಯವ ನೀಡುವ ಶ್ರೀಕೃಷ್ಣ
ಗೀತೆಯ ಬೋಧಿಸಿ ನೀತಿಯನರುಹಿದ
ಸುಜ್ಞಾನ ಮತಿಯು ನೀ ಶ್ರೀಕೃಷ್ಣ..||೧||

ಬೆಣ್ಣೆಯ ಮೆಲುತ ತುಂಟಾಟವಗೈವ
ಯಶೋದೆಯ ಮುದ್ದು ಶ್ರೀಕೃಷ್ಣ
ಗೋವರ್ಧನ ಗಿರಿ ಕಿರುಬೆರಳಲೆತ್ತಿದ
ಮಹಾಮಹಿಮನೇ ಶ್ರೀಕೃಷ್ಣ..||೨||

ಪಿಳ್ಳಂಗೋವಿಯ ರಾಗದಿನುಡಿಸಿ
ರಾಧೆಗೊಲಿದವನೇ ಶ್ರೀಕೃಷ್ಣ
ತೇಜೋಮಯನೇ ಪೀತಾಂಬರಧರನೇ
ಶ್ರೀ ತುಳಸೀಪ್ರಿಯ ಶ್ರೀಕೃಷ್ಣ..||೩||

ನಿನ್ನನೆ ನುತಿಸುವೆ ನೈವೇದ್ಯವ ನೀಡುವೆ
ಬಿಡದೇ ಪೊರೆಯೋ ಶ್ರೀ ಕೃಷ್ಣ
ಹಗಲಿರುಳೆನ್ನದೆ ಅನುದಿನವೆಮಗೆ
ಸುಭಿಕ್ಷೆಯ ನೀಡೋ ಶ್ರೀಕೃಷ್ಣ..||೪||

✍️... ಅನಿತಾ ಜಿ.ಕೆ.ಭಟ್.
11-08-2020.



No comments:

Post a Comment