Thursday, 27 August 2020

ಸಿಹಿಕಹಿ ನೆನಪು

 



ಅಂದು ಕಿರುಗಣ್ಣಿನಲೆ

ನಕ್ಕು ನನ್ನೆದೆಯ ಮೀಟಿದ ನೆನಪು...

ದೂರದಲೆ ನಿಂತು ನಿಸ್ತಂತು ಸಂದೇಶವ

ಕಳುಹಿಸಿದ ಸವಿನೆನಪು..

ಪ್ರೇಮವು ಕುಡಿಯೊಡೆಯೆ 

ಮಡಿಲಲಿ ಶಿರವ ನೇವರಿಸಿದ ನೆನಪು..

ಪ್ರಸವ ವೇದನೆಯಲಿ ಬಳಲಿರಲು

ನಾ ಹಂಚಿಕೊಳ್ಳಲಾರದೇ

ಹೋದೆನೇ ..ಹತಾಶೆಯ ನೆನಪು..

ಮುದ್ದುಮಗುವಿನ ವದನದಲಿ

ನಿನ್ನ ಅಗಲ ಮೊಗದ 

ಚಹರೆಯೇ ಕಂಡ ನೆನಪು..

ಲಾಲನೆ ಪಾಲನೆಗೆ ಕೈಜೋಡಿಸಲಾರದೆ

ನನ್ನನೇ ನಾನು ಪ್ರಶ್ನಿಸಿಕೊಂಡ ನೆನಪು..

ಹಗಲು ರಾತ್ರಿ ನಿದ್ದೆಗೆಟ್ಟು ನಿಭಾಯಿಸುವ

ನಿನ್ನ ರೂಪವನಾಡಿದಾಗ ಜಗವೇಕೆ 

ಹೀಗೆ ಎಂದು ನೊಂದ ನೆನಪು..

ಮಗು ಮೊದಲಬಾರಿ ಅಪ್ಪಾ ಎಂದಾಗ 

ಎದೆಯುಬ್ಬಿಸಿದ ಹೆಮ್ಮೆಯ ನೆನಪು..

ಜವಾಬ್ದಾರಿ ಹೊರುತಲಿ 

ಕಡೆಗಣಿಸಿ ಹೋದ ನೆನಪು..

ಸಿಹಿಕಹಿಯ ನೆನಪಿಂದು 

ಬಿಟ್ಟುಬಿಡದೇ ಕಾಡುತಿದೆ ..

ನಿವೃತ್ತಿಯ ಖಾಲಿ ಪುಟಗಳಲಿ...

ಮತ್ತೆ ಮರಳಲಾರದ ದಿನಗಳ

ಸವಿಯದ ಯಜಮಾನ 

ಹಿಡಿದಿಟ್ಟ ನೆನಪು..


✍️... ಅನಿತಾ ಜಿ.ಕೆ.ಭಟ್.

25-08-2020.

No comments:

Post a Comment