Wednesday, 10 March 2021

ಶಿವ ನಮನ

 



#ಶಿವ_ನಮನ

ಶಿವಶಂಕರ.. ಕರುಣಾಕರ..
ಬಿಲ್ವಪ್ರಿಯ.. ರಕ್ಷಮಾಂ ಚಿನ್ಮಯ..||ಪ||

ನಂದಿವಾಹನ ಹರ ಅಂಬಿಕೆಯರಸ
ಮಾರನ ರಿಪು ಪುಲಿದೊಗಲ ಹಾಸು
ವಂದಿಪೆ ಶಿರಬಾಗಿ ಮದಮೋಹ ನಾಶ
ಸುರಸಂಪೂಜಿತ ಸುಗುಣನೆ ಹರಸು||೧||

ಕೃತ್ತಿವಾಸ ಶುಭಕಾಯ ನೀಲಕಂಧರ
ಪ್ರಭಂಜನಪ್ರಿಯ ಉಮಾಮನೋಹರ
ಭವತಾರಕ ಶಿವ ವಿಶೇಷ ಮಹಿಮ
ಯಶಕಾರಕ ಶರಣು ದೇವದೇವೋತ್ತಮ||೨||

ಢಮರುಗಧರ ನಾಟ್ಯಭೈರವ
ತಮವನಳಿಸೋ ಪಂಚಾಕ್ಷರ ಶಿವ
ನಾಮವ ನುತಿಸೆ ಅಭಯವನೀವ
ದಮನಿತ ದುರ್ದನುಜಾಸುರ, ದೇವ||೩||

ತೋಷಗೊಳುವೆ ನಿನ್ನ ಸೇವೆಯೊಳು
ಈಶ ಸುರೇಶ ಗಿರೀಶ ಸರ್ವೇಶ
ಹರ್ಷವ ಸುರಿಸು ಧರೆಯೊಳು
ಶ್ರೀಶ ನಟೇಶ ಮಹೇಶ ಗೌರೀಶ...||೪||

✍️... ಅನಿತಾ ಜಿ.ಕೆ.ಭಟ್.
10-03-2021.

#ಸೌಹಾರ್ದ ಬಳಗ
#ಸಿಗ್ನೇಚರ್ ಲೈನ್
#ಈಶ ನಿನ್ನ ಸೇವೆಯಲ್ಲೇ ತೋಷವನ್ನು ಕಾಣುವೆ



No comments:

Post a Comment