Saturday, 13 March 2021

ಮುಗ್ಧತೆ

 


#ಮುಗ್ಧತೆ


ಅರರೇ....
ಯಾಕ್ ಹಿಂಗೇ ನಗ್ತೀಯಾ ನಿಂಗೀ
ಇದು ನನ್ನಪ್ಪ ತಂದಿರೋ ಕೆಂಪಂಗಿ...

ನಿನ್ನ ನಗುವಲ್ಲಿ ತುಂಬೈತೆ ಸೆಳೆತ
ಅದರ್ಮುಂದೆ ಸೋತೈತೆ ಅಯಸ್ಕಾಂತ...

ನಾ ಕೊಡ್ಲೇ ನಿನ್ ಬಾಯ್ಗೆ ಕವಳಾ
ಆಗೋಯ್ತು ಬಾಯ್ಬಣ್ಣ ಹವಳಾ...

ತೋಟಕ್ಕೆ ನಾ ಬರುವೆ ನಿನ್ ಕೂಡೇ
ಅಪ್ಪಮ್ಮಂಗೆ ಹೇಳ್ಬೇಡ ನೋಡೇ...

ಮಡಿ ಮಡಿ..ದೂರ ಸರಿ ಅಂದಾರು ಅಜ್ಜಿ
ಜತೆಗೂಡಿ ಆಡಲು ನಂಗ್ಬೇಕು ನಿಂಗಿ ಅಜ್ಜಿ...

ಹೀಗೆಲ್ಲ ಅನ್ಬೇಡಿ ಅಣ್ಣೇರ ಬಾಲೆ
ಕೋಪಮಾಡ್ಯಾರು ದನಿ ನನ್ನ್ ಮ್ಯಾಲೇ..

ತೋಟ್ದಲ್ಲಿ ಕೆಲ್ಸ ಇನ್ನೂ ಮುಗ್ದಿಲ್ಲೆ ಮಾಣೀ
ತರಗೆಲೆ ತರಲು ಹಿಡೀಬೇಕೀಗ ಗೋಣಿ..

ನಾ ಕೆಲ್ಸದೋಳು ನಂಗೆ ಬೈರಾಸು ಮುಂಡಾಸು
ನೀನೀ ಮನೆಯ ಬೆಳಕು ನಿನ್ನ ನಗುವೆಂಥಾ ಸೊಗಸು...

ತುಂಟಾಟ ಬಿಟ್ಟು ಮಲಗು ಅಮ್ಮನ ಮಡಿಲಲಿ
ಹಾಡೋಳು ನಿನ್ನಮ್ಮ ಚೆಂದದ ಜೋಗುಳದ ಲಾಲಿ...

ಚೆಂದಾಗಿ ಬಾಳು ದನಿಮನೆಯ ಕಂದಾ
ಆಳಾಗಿ ದುಡಿವ ನನಗದುವೇ ಆನಂದ...

✍️... ಅನಿತಾ ಜಿ.ಕೆ.ಭಟ್.
13-03-2021.
ಚಿತ್ರ ಕೃಪೆ:- ಹವಿಸವಿ ಬಳಗ.


No comments:

Post a Comment