Sunday, 21 March 2021

ಕೊಳಲ ಗಾನ

 

#ಕೊಳಲಗಾನ

ಕೃಷ್ಣ ನಿನ್ನ ಕೊಳಲಗಾನ
ಕೇಳಲೆನಿತು ಸುಮಧುರ
ಹರಿವ ಯಮುನೆ ತಟದಿ
ಮೋಹಗೊಳಿಪ ಸುಸ್ವರ||೧||

ರಾಧೆಯೊಲಿದ ವೇಣುನಾದ
ಮನದಾಳದಿ ಮಾರ್ದನಿ
ಮುರಳಿಯೊಲುಮೆ ನಿತ್ಯ ಬಯಸಿ
ಕನಸಿನಲ್ಲಿ ಇನಿದನಿ||೨||

ಕೋಗಿಲೆಯು ಹಾಡು ಮರೆತು
ಆಲಿಸುತ ನಿನ್ನ ಇಂಪು
ಗರಿಬಿಚ್ಚಿಹ ನವಿಲುಗಳ
ಕುಣಿತ ನೋಟ ಸೊಂಪು||೩||

ಪ್ರೀತಿ ಲಹರಿಯು  ಶರಧಿಯಾಗಿ
ಚಿತ್ತ ಮುತ್ತಿಹೆ ಮಾಧವ
ನಿನ್ನ ಪ್ರೇಮದ ಭಾವಬೆಸುಗೆಯು
ಬರಿಯ ರಾಧೆಗೇಕೆ ಕೇಶವ?||೪||

✍️..ಅನಿತಾ ಜಿ.ಕೆ.ಭಟ್.
21-03-2021.

ದತ್ತ ಚಿತ್ರ 👇








No comments:

Post a Comment