ಸತ್ಯನಾರಾಯಣ ಪೂಜೆ ಹಾಡು
ಬೇಡಿದ ಭಕ್ತಗೆ ಇಷ್ಟಾರ್ಥಗಳನ್ನು ಕರುಣಿಸುವ ದೇವ ಸತ್ಯನಾರಾಯಣ.ಕರಾವಳಿ ಭಾಗದ ಹವ್ಯಕರಲ್ಲಿ ಸತ್ಯನಾರಾಯಣ ದೇವರ ಪೂಜೆಯನ್ನು ಪುರೋಹಿತರು ಮಂತ್ರೋಚ್ಛಾರಣೆಯ ಮೂಲಕ ನೆರವೇರಿಸಿದಾಗ ಹೆಂಗಳೆಯರು ಹಾಡಿನ ಮೂಲಕ ಸತ್ಯನಾರಾಯಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ.ಇಂತಹ ಹಾಡುಗಳ ರಚನೆಕಾರರು ಯಾರು ಎಂಬುದು ತಿಳಿಯದಿದ್ದರೂ ಓಲೆಗರಿಗಳಲ್ಲಿ ನಮೂದಾಗಿ,ಒಬ್ಬರಿಂದ ಇನ್ನೊಬ್ಬರು ಕಲಿತು ಹಾಡನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದರು.ಪುಸ್ತಕಗಳ ಬಳಕೆ ಆರಂಭವಾದಾಗ ಹಲವರು ಹಸ್ತಪ್ರತಿ ಮಾಡಿಟ್ಟುಕೊಂಡರು.ಹೀಗೆ ಪಸರಿಸಿದಾಗ ಒಂದೇ ಹಾಡಿನಲ್ಲಿ ಹಲವಾರು ಬದಲಾವಣೆಗಳಾದವು ಉಚ್ಛಾರಣೆ, ಅಲ್ಪಪ್ರಾಣ ಮಹಾಪ್ರಾಣ, ಪದಪ್ರಯೋಗ.. ಇತ್ಯಾದಿ.ನನಗೆ ದೊರೆತ ಹಸ್ತಪ್ರತಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವಷ್ಟು ಜ್ಞಾನ ನನಗಿಲ್ಲ.ನನಗೆ ತಿಳಿದಿರುವ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೇನಾದರೂ ಬದಲಾವಣೆ ಮಾಡಬೇಕೆಂದು ಕಂಡುಬಂದಲ್ಲಿ ತಿಳಿಸಬಹುದು.
ಸತ್ಯನಾರಾಯಣ ಪೂಜೆಯ
ಪ್ರಸಾದ ಬೇಡುವ ಹಾಡು -೧
ಪ್ರಸಾದ ಬೇಡುವ ಹಾಡು -೧
ಕರುಣಿಸೆಮಗೆ ಸುಪ್ರಸಾದವ ಸತ್ಯದೇವ
ಶಿರದಿ ಮೆರೆವ ಶ್ರೇಷ್ಠ ಪುಷ್ಪವ
ದುರಿತ ಹರ ಸಪಾದ ಭಕ್ಷ್ಯವ ನೀಡು ಎಮಗೆ
ದುರಿತ ಹರ ಸಪಾದ ಭಕ್ಷ್ಯವ ನೀಡು ಎಮಗೆ
ಹರುಷದಿಂದ ಶ್ರೀರ ಮಾಧವ ||ಪಲ್ಲವಿ||
ನಿರತ ನಿನ್ನ ಪೂಜೆ ಮಾಡಿ
ಪರಮ ಭಾಗ್ಯವೆಮಗೆ ನೀಡಿ
ಪರಮ ಭಾಗ್ಯವೆಮಗೆ ನೀಡಿ
ಪೊರೆಯಬೇಕೆನುತ್ತ ಬೇಡಿ
ಎರಗಿ ನಿಂದೆ ನಿನ್ನ ನೋಡಿ ||೧||
ಎರಗಿ ನಿಂದೆ ನಿನ್ನ ನೋಡಿ ||೧||
ನಾದ ಬಿಂದು ಜ್ಯೋತಿ ರೂಪನೇ ನಿನ್ನ ಭಜಿಪ
ಸಾಧು ಸಂತರನ್ನು ಪೊರೆವನೇ
ಮೇಧಿನೀಯ ದುರುಳ ಹರಣ
ಸಾಧಿಸುತ್ತ ಶ್ರೇಷ್ಠ ಶರಣ
ರಾಧಮನುಜರೆರಗೆ ಕರುಣ
ನಾದ ನೀನು ತೋರಿ ಚರಣ ||೨||
ಸಾಧಿಸುತ್ತ ಶ್ರೇಷ್ಠ ಶರಣ
ರಾಧಮನುಜರೆರಗೆ ಕರುಣ
ನಾದ ನೀನು ತೋರಿ ಚರಣ ||೨||
ಉರಗ ಶಯನ ಪದ್ಮನಾಭನೇ ಅಘವಿನಾಶ
ಕರುಣ ನಯನ ಮಾರ ಜನಕನೇ
ದುರುಳ ದಮನ ಲೋಕ ಪಾಲನೇ
ಸುರೇಶವಂದ್ಯ ಗರುಡಗಮನ ಲಕ್ಷ್ಮಿಲೋಲನೇ
ಸುರೇಶವಂದ್ಯ ಗರುಡಗಮನ ಲಕ್ಷ್ಮಿಲೋಲನೇ
ಧರೆಯೊಳಧಿಕ ವೆನಿಪ ಕೊಲ್ಲಪುರದಿ ವಾಸಿತೆ ದೇವಿ
ಸೋದರನೆ ಎಮ್ಮ ತಪ್ಪನೊಪ್ಪಿ
ಪೊರೆಯೆನುತ್ತಲೆರಗಿ ಬೇಡ್ವೇ ||೩||
- ಸಂಗ್ರಹ
ಅನಿತಾ ಜಿ.ಕೆ.ಭಟ್.
22-07-2020.
22-07-2020.
🙏🙏💐
ReplyDelete💐🙏 ಧನ್ಯವಾದಗಳು...
Delete