Friday, 24 July 2020

ಸೀಬೆ/ಪೇರಳೆ ಹಣ್ಣಿನ ಹಲ್ವಾ 😋


       
                       ಪೇರಳೆ/ಸೀಬೆ ಹಣ್ಣಿನ ಹಲ್ವಾ

     ಪೇರಳೆ/ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ.ಇದರಲ್ಲಿ ವಿಟಮಿನ್ ಸಿ ಮತ್ತು ಖನಿಜಾಂಶಗಳು ಹೇರಳವಾಗಿದ್ದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಲು ಸಹಕಾರಿ.ಈ ಗುಣಗಳಿಂದಾಗಿ ಬಡವರ ಸೇಬು ಎಂದೇ ಕರೆಯಲ್ಪಡುತ್ತದೆ.ದಿನಕ್ಕೊಂದು ಅಥವಾ ಎರಡು ತಾಜಾ ಪೇರಳೆ ಹಣ್ಣುಗಳ ಸೇವನೆಯಿಂದ ದೇಹವನ್ನು ಕಾಯಿಲೆಗಳನ್ನು ದೂರವಿಡಬಹುದು.ಒಮ್ಮೆಲೇ ಹತ್ತಾರು ಹಣ್ಣುಗಳು ಸಿಕ್ಕಾಗ ಹಲ್ವಾ ತಯಾರಿಸಬಹುದು.



ಬೇಕಾಗುವ ಸಾಮಗ್ರಿಗಳು:-
ಪೇರಳೆ ಹಣ್ಣಿನ ಪೇಸ್ಟ್ -2 ಕಪ್
ಸಕ್ಕರೆ-1ಕಪ್
ತುಪ್ಪ-1/2ಕಪ್
ಗೋಧಿ ಹುಡಿ-1/2ಕಪ್
ಏಲಕ್ಕಿ

ಮಾಡುವ ವಿಧಾನ:-
ಬಲಿತ ಪೇರಳೆಯನ್ನು ಸೀಳಿ ಎರಡು ಭಾಗಗಳಾಗಿ ಮಾಡಿಕೊಂಡು , ಸ್ವಲ್ಪ ನೀರು ಹಾಕಿ ಕುಕ್ಕರ್ ನಲ್ಲಿ ಮೂರು ಸೀಟಿ ಕೂಗಿಸಿ ಬೇಯಿಸಿಕೊಳ್ಳಿ.ತಣ್ಣಗಾದ ನಂತರ ಹಣ್ಣಿನ ತುಂಡುಗಳನ್ನು ನೀರಿನಿಂದ ತೆಗೆದುಕೊಂಡು ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿ...ಸೋಸಿಕೊಳ್ಳಿ.ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗೋಧಿ ಹುಡಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ.ನಂತರ ಪೇರಳೆ ಹಣ್ಣಿನ ರುಬ್ಬಿದ ಮಿಶ್ರಣವನ್ನು ಹಾಕಿ ತುಪ್ಪ ಹಾಕಿ ತಿರುವಿ.ಹಸಿವಾಸನೆ ಹೋದ ನಂತರ ಗೋಧಿ ಹುಡಿ ,ಸಕ್ಕರೆ ಹಾಕಿ ತಿರುವುತ್ತಿರಿ.ಪಾಕ ತಳಬಿಟ್ಟು ಬಂದಾಗ ಏಲಕ್ಕಿಪುಡಿ ಬೆರೆಸಿ... ತುಪ್ಪ ಸವರಿದ ತಟ್ಟೆಗೆ ಹಾಕಿ ಕತ್ತರಿಸಿ ..ಬಿಸಿ ಬಿಸಿ ಪೇರಳೆ ಹಲ್ವಾ ರೆಡಿ.


✍️ ... ಅನಿತಾ ಜಿ.ಕೆ.ಭಟ್.
24-07-2020.


2 comments:

  1. ಕೆಂಪು ಪೇರಳೆ... ರುಚಿಕರ ಹಲ್ವಾ...

    ReplyDelete
    Replies
    1. ನಿಜವಾಗಿಯೂ.. ಸೂಪರ್ 👌
      ಥ್ಯಾಂಕ್ಯೂ 💐🙏

      Delete