Friday, 23 April 2021

ಧರೆಯಾಳೋ ದೊರೆರಾಮ

 


#ಧರೆಯಾಳೋ ದೊರೆರಾಮ

ಧರೆಯಾಳೋ ದೊರೆ ರಾಮ
ನಿನ್ನಡಿಗೆ ಶರಣು||
ಗುರುವಾಗಿ ಗುರಿತೋರಿ
ತೆರೆಸೆನ್ನ ಕಣ್ಣು...||೧||

ಕೆಡುಕಿನಲಿ ಕೂಗಿಹೆನು
ಕಾರುಣ್ಯ ನಿಧಿಯ||
ಒಳಿತಿನಲೂ ನೆನೆವಂತೆ
ಕೊಡು ನೀ ಮತಿಯ...||೨||

ಭಯದ ಕಾರಿರುಳಿನಲಿ
ಅಡಿಗಡಿಗೆ ರಾಮ||
ಮಾಯಾ ಮಹಿಮೆಯಲಿ
ನಡೆನುಡಿಯಲಿ ರಾಮ...||೩||

ಹೂವಿನಲಿ ಹಣ್ಣಿನಲಿ
ಎಲ್ಲೆಲ್ಲೂ ರಾಮ||
ಅಜ್ಞಾನವ ಅರಿವಿನಲಿ
ಗೆಲ್ಲಲೂ ರಾಮ...||೪||

ಭುವಿಯೊಳಗೆ ಬಾನಗಲ
ಹಬ್ಬಿರುವೆ ರಾಮ||
ನನ್ನೆದೆಯ ಗುಡಿಯೊಳಗೂ
ರಘುರಾಮ ರಾಮ...||೫||

ಜಗದೆಲ್ಲ ಜಂಜಡಕೂ
ಜಪ ರಾಮನಾಮ||
ಶಕುತಿಗೂ ಮುಕುತಿಗೂ
ಭಜ ರಾಮ ರಾಮ...||೬||

ಅಕ್ಕರದ ಪೂಜೆಯಿದು
ಸ್ವೀಕರಿಸು ರಾಮ||
ಅಕ್ಕರೆಯ  ನಮನವಿದು
ಆತ್ಮಸಖ ರಾಮ...||೭||

✍️... ಅನಿತಾ ಜಿ.ಕೆ.ಭಟ್.
21-04-2021.



No comments:

Post a Comment