ಟಾಪ್ ಬ್ಲಾಗ್ ಎಂಟ್ರಿ- ಬಹುಮಾನ
ನವೆಂಬರ್ 2020 ರಲ್ಲಿ ಮಾಮ್ಸ್'ಪ್ರೆಸೊ ಆಯೋಜಿಸಿದ ತಿಂಗಳ ಟಾಪ್ ಬ್ಲಾಗ್ ಸ್ಪರ್ಧೆಯಲ್ಲಿ ನಾನು ಬರೆದ "ಮಕ್ಕಳ ಸ್ನಾನದ ಕೈ ಬದಲಾಯಿಸುವ ಮುನ್ನ ಎಚ್ಚರವಿರಲಿ"ಎಂಬ ಬ್ಲಾಗ್ ಉತ್ತಮ ಬ್ಲಾಗ್ ಎಂಟ್ರಿ ಎಂಬ ಸ್ಥಾನ ಪಡೆದು ₹500 ನಗದು ಬಹುಮಾನವನ್ನು ಗಳಿಸಿದೆ.
ಟಾಪ್ ಬ್ಲಾಗ್ ಸ್ಪರ್ಧೆಯಲ್ಲಿ ನಾನ್ನೂರಕ್ಕೂ ಅಧಿಕ ಬರಹಗಳು ಬಂದಿದ್ದು ಅದರಲ್ಲಿ ನಾಲ್ಕನ್ನು ಆಯ್ಕೆ ಮಾಡಲಾಗಿತ್ತು. ಮೊದಲನೆಯದು ಟಾಪ್ ಬ್ಲಾಗ್. ಉಳಿದ ಮೂರು ಉತ್ತಮ ಎಂಟ್ರಿಗಳು ಎಂಬುದಾಗಿ ಪರಿಗಣಿಸಲಾಗಿತ್ತು. ಉತ್ತಮ ಎಂಟ್ರಿ ವಿಭಾಗದಲ್ಲಿ ನನ್ನ ಬ್ಲಾಗ್ ಮೊದಲ ಸ್ಥಾನವನ್ನು ಪಡೆದಿರುವುದು ಬಹಳ ಸಂತಸದ ಸಂಗತಿಯಾಗಿದೆ. ಸದಾ ಪ್ರೋತ್ಸಾಹವನ್ನು ನೀಡುತ್ತಿರುವ ಮಾಮ್ಸ್'ಪ್ರೆಸೊ ವೇದಿಕೆ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಭಿಡೆ ಮೇಡಂಗೆ ಧನ್ಯವಾದಗಳು. 💐🙏 ಓದಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸಹಬ್ಲಾಗರುಗಳಿಗೂ ವಂದನೆಗಳು.. ಓದುಗ ಅಮ್ಮಂದಿರಿಗೆ ನನ್ನ ಕೃತಜ್ಞತೆಗಳು..🙏
#anithagkbhat.
ಬರಹದ ಲಿಂಕ್ ಇಲ್ಲಿದೆ..
https://itsanithas.blogspot.com/2021/04/blog-post_16.html?m=1
No comments:
Post a Comment