Friday, 16 April 2021

ಟಾಪ್ ಬ್ಲಾಗರ್- ಬಹುಮಾನ

 


ಟಾಪ್ ಬ್ಲಾಗರ್ - ಬಹುಮಾನ

ಫೆಬ್ರವರಿ 2021 ರಲ್ಲಿ ಮಾಮ್ಸ್'ಪ್ರೆಸೊ ಆಯೋಜಿಸಿದ ತಿಂಗಳ ಟಾಪ್ ಬ್ಲಾಗ್ ಸ್ಪರ್ಧೆಯಲ್ಲಿ ನಾನು ಬರೆದ "ಆಭರಣಗಳು ಮಸುಕಾಗುವುದು, ಮೈಬಣ್ಣ ಗಾಢವಾಗಿರುವುದು ಅವಳ ತಪ್ಪಾ? "ಎಂಬ ಬ್ಲಾಗ್ ಟಾಪ್ ಬ್ಲಾಗ್  ಎಂಬ ಸ್ಥಾನ ಪಡೆದು ₹1000 ನಗದು ಬಹುಮಾನವನ್ನು ಗಳಿಸಿದೆ. ನನಗೆ ಟಾಪ್ ಬ್ಲಾಗರ್ ಎಂಬ ಪಟ್ಟವನ್ನು ನೀಡಿದೆ.

      ಟಾಪ್ ಬ್ಲಾಗ್ ಸ್ಪರ್ಧೆಯಲ್ಲಿ ಐನೂರಕ್ಕೂ ಅಧಿಕ ಬರಹಗಳು ಬಂದಿದ್ದು ಅದರಲ್ಲಿ ನಾಲ್ಕನ್ನು ಆಯ್ಕೆ ಮಾಡಲಾಗಿತ್ತು. ಮೊದಲನೆಯದು ಟಾಪ್ ಬ್ಲಾಗ್. ಉಳಿದ ಮೂರು ಉತ್ತಮ ಎಂಟ್ರಿಗಳು ಎಂಬುದಾಗಿ ಪರಿಗಣಿಸಲಾಗಿತ್ತು. ನನ್ನ ಬ್ಲಾಗ್ ಟಾಪ್ ಬ್ಲಾಗ್  ಸ್ಥಾನವನ್ನು ಪಡೆದಿರುವುದು ಬಹಳ ಸಂತಸದ ಸಂಗತಿಯಾಗಿದೆ. ಸದಾ ಪ್ರೋತ್ಸಾಹವನ್ನು ನೀಡುತ್ತಿರುವ ಮಾಮ್ಸ್'ಪ್ರೆಸೊ ವೇದಿಕೆ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಭಿಡೆ ಮೇಡಂಗೆ ಧನ್ಯವಾದಗಳು. 💐🙏 ಓದಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸಹಬ್ಲಾಗರುಗಳಿಗೂ ವಂದನೆಗಳು.. ಓದುಗ ಅಮ್ಮಂದಿರಿಗೆ ನನ್ನ ಕೃತಜ್ಞತೆಗಳು..🙏

ಟಾಪ್ ಬ್ಲಾಗ್ ಬಗ್ಗೆ ಸಂಪಾದಕರ ಮೆಚ್ಚುಗೆಯ ನುಡಿ ಕೆಳಗಿದೆ...


ಧನ್ಯವಾದಗಳು ಮಾಮ್ಸ್'ಪ್ರೆಸೊ 💐🙏

#anithagkbhat.


ಬರಹದ ಲಿಂಕ್ ಇಲ್ಲಿದೆ...

https://itsanithas.blogspot.com/2021/04/blog-post_30.html?m=1

2 comments: