#ಹನುಮ ನಮನ
ಆಂಜನೇಯನೇ ವೀರಹನುಮನೇ
ನೀನಾಗು ದೇಹದ್ವಾರದ ಪಾಲಕ|| ಪ||
ಪವನತನಯನೇ ನಿನ್ನಾಜ್ಞೆ ಮೀರಿ
ನುಸುಳಿದ ಶತ್ರುಕಣದ ನಿರ್ನಾಮಕ||ಅ.ಪ.||
ಹನುಮ ನಿನ್ನಯ ಪುಣ್ಯ ನಾಮವ
ಸ್ಮರಣೆ ಮಾಡುವೆ ಅನುದಿನ
ಜನುಮಪಡೆದ ಭುವಿಯಲಾಗಲಿ
ರೋಗದಣುವಿನ ಮರ್ದನ||೧||
ಸೀತಾಮಾತೆಯ ಶೋಕವಳಿಸಿದ
ಶ್ರೀರಾಮ ದೂತ ಮಾರುತಿ
ಚಿಂತಾಸಾಗರದೊಳಗೆ ಮುಳುಗಿದ
ಸಕಲಜೀವಕೂ ನೀ ಗತಿ||೨||
ವಾಯುವೇಗದಿ ಇಳೆಗೆ ಸುಳಿದು
ರಕ್ಷಿಸೆಮ್ಮನು ವಜ್ರಕಾಯ
ಭಯವನೀಗುತ ಧೈರ್ಯತುಂಬುತ
ಅಮಿತಪರಾಕ್ರಮಿ ನೀಡುಜಯ||೩||
ಕಾಣದಣುವಿನ ಹಠವನಳಿಸಲು
ಸೂಕ್ಷ್ಮ ರೂಪದಿ ಹರಸು ನೀ
ಸಂಜೀವಿನಿಯ ತಂದು ರೋಗಕ್ರಿಮಿಯ
ವಿಕಟರೂಪದಿ ಸಂಹರಿಸು ನೀ ||೪||
✍️... ಅನಿತಾ ಜಿ.ಕೆ.ಭಟ್.
27-04-2021.
🙏🙏
ReplyDelete🙏 ಧನ್ಯವಾದಗಳು 💐
Delete