ಗೋಮಾತೆ
ಗೋವು ಜಗಕೆಲ್ಲ ಮಾತೆ
ಕರುವಿಗೂ ಜನರಿಗೂ ಅಮೃತದಾತೆ
ಮುಕ್ಕೋಟಿ ದೇವತೆಗಳಿಗೆ ಆಶ್ರಯದಾತೆ
ಹಾಲು ಕರೆವಳು ವಾತ್ಸಲ್ಯದಲಿ ನನ್ನ ಜನ್ಮದಾತೆ||
ಹಸಿ ಸೊಪ್ಪು ಹುಲ್ಲು
ಇಲ್ಲದಿರೆ ಬೈಹುಲ್ಲು
ಪುಷ್ಟಿಗೆ ಹಿಂಡಿ ಕೊಡಲು
ಬಿಂದಿಗೆ ತುಂಬ ನೊರೆಹಾಲು
ಒಡಲಿಗೆ ತಂಪು ತಂಬಾಲು
ಹಾಲು ಮೊಸರು ಬೆಣ್ಣೆ
ತುಪ್ಪ ಮಜ್ಜಿಗೆ
ಊಟದಿ ನಿನ್ನದೇ ಬಹುಪಾಲು||
ಗೋಮೂತ್ರದಲಿ ಸಕಲವ್ರಣ ಪರಿಹಾರ
ಗೋಮಯವು ಗಿಡಗಳಿಗೆ ಆಹಾರ
ಬಳಿದರೆ ಮನೆ,ಅಂಗಳ ಸುಂದರ
ಕೆಟ್ಟ ಸೂಕ್ಷ್ಮಾಣುಜೀವಿ ಸಂಹಾರ||
ಛಂಗನೆ ನೆಗೆವ ಕರು
ದನದ ಹಟ್ಟಿಗೆ ಸಿಂಗಾರ
ಕಟ್ಟುವರು ಹಾಕಿ ದಾರ
ತುಂಟಾಟ ಹೆಚ್ಚಿದರೆ
ಮುಂದೆ ಮೂಗುದಾರ||
ಈಗ ಗೋವಿಗೆ ಸಿಗುತಿಲ್ಲ
ಸ್ವಚ್ಛಂದ ವಿಹಾರ
ನಂದಿಯ ಮಮಕಾರ
ಸೂಜಿಯಲೇ ಪರಿಹಾರ?
ಆಸೆಯಾಗದೇ ಅದಕೂ
ಬೇಕೆಂದು ಸಂಸಾರ||
ಸಕಲ ಕಾರ್ಯಕೂ ಶುಭಕರ
ಮಾಡುವೆವು ಮುಟ್ಟಿ ನಮಸ್ಕಾರ
ತೀರಿಸುವುದೆನಿತು ಗೋವಿನ ಋಣ
ಮಾರಿಬಿಡುವರಲ್ಲ ಪಡಕೊಂಡು ಹಣ||
ಗೋವು ಆಗದಿರಲಿ
ಕಟುಕರ ಪಾಲು
ಇನಿತು ಬೇಡುವೆ ದಿನಾಲೂ
ಹೀಗೆ ನೊಂದು ಬರೆಯಲು
ಆಗಬಹುದೇ ರಕ್ಕಸರ
ಮನಸು ಬದಲು?||
✍️... ಅನಿತಾ ಜಿ.ಕೆ.ಭಟ್.
14-09-2020.
ಚಿತ್ರ ಕೃಪೆ:ಹವಿಸವಿ ಬಳಗ
ಒಂದೂವರೆ ವರ್ಷದ ಹಿಂದೆ ಬರೆದ ಕವನ 02-03-2019.
ಹವಿಸವಿ ಬಳಗದ ವಾರದ ಚಿತ್ರಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.(ನಾನು ಈ ಕವನವನ್ನು ಬರೆದು ಅಧಿಕೃತವಾಗಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟಿವಳು .ಮೊದಲ ಕವನ..ಮೊದಲ ಗೆಲುವು..ಮೊದಲ ಹೆಜ್ಜೆ...)
ಪ್ರತಿಸಾಲುಗಳು ಅರ್ಥಪೂರ್ಣವಾಗಿದೆ ಗೋಮಾತೆಯ ಮಹತ್ವ ಹಿರಿದು. ಸುಂದರವಾಗಿದೆ ಈ ಕವನ😍
ReplyDeleteಥ್ಯಾಂಕ್ಯೂ 💐🙏
Delete👏👏👍
ReplyDeleteಥ್ಯಾಂಕ್ಯೂ 💐🙏
DeleteSuper.... ತುಂಬಾ ಚೆನ್ನಾಗಿದೆ...
ReplyDeleteಅರ್ಥಪೂರ್ಣಕವನ.ಗೊಓ ಮಾತೆಗೆ ನಮನ.
ReplyDelete