Wednesday, 16 September 2020

ಹಸಿರ ಸಿರಿ.....#ಕವನ

 


  ಹಸಿರ ಸಿರಿ


ಹದವಾದ ಮಳೆ
ರೈತನ ಮೊಗದಿ ಕಳೆ
ತಂಪಾಗಿಹಳು ಇಳೆ
ಉತ್ತು ಬಿತ್ತಿ ಬೆಳೆ....||

ಸೆಳೆಯುತಿದೆ ಹಸಿರು
ಹರಿಸುತಿಹ ಬೆವರು
ದುಡಿಯುತಿಹ ಕಾರ್ಮಿಕರು
ಛಲಬಿಡದ ಶ್ರಮಿಕರು....||

ಲಾಭ ಕಾಣದ ರೈತ
ನಿಂತಿಹನು ಸೋತು
ಧರೆಯೊಳಿಟ್ಟ ನಂಬುಗೆ
ನೀಡಲಿ ಅನ್ನ ಹಸಿವಿಗೆ....||

ಪಚ್ಚೆ ಪೈರಿನ ದೇಗುಲ
ಋಣ ತೀರಿಸದ ಸಂಕುಲ
ಸಲಹುತಿದೆ ಸಕಲ
ತುರ್ತು ಬೇಕಿದೆ ಬೆಂಬಲ....||

ಸಮವಸ್ತ್ರದಿ ಭೂರಮೆ
ಕಾಡುತಿದೆ ನನ್ನೀ ಭ್ರಮೆ
ಪಾಡ್ದನ ಹಾಡಿನ ಗರಿಮೆ
ಹಿರಿಕಿರಿಯರುತ್ಸಾಹ ಚಿಲುಮೆ
ಬೆಲೆಕಟ್ಟಲಾಗದ ದುಡಿಮೆ
ಕರುನಾಡ ಹಸಿರ ಸಿರಿ ಹಿರಿಮೆ....||

✍️... ಅನಿತಾ ಜಿ.ಕೆ.ಭಟ್.
16-09-2020.

ಹವಿಸವಿಯ ಭಾವ ಚಿತ್ರಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕವನ.

No comments:

Post a Comment