Tuesday, 15 September 2020

ತಾಯಿ ಭಾರತಿಯ ಕರೆ #ಕವನ

 


ತಾಯಿ ಭಾರತಿಯ ಕರೆ

ಓ ನನ್ನ ಮಡಿಲ ಕಂದಗಳಿರಾ....
ಹದಿನೆಂಟರ ಗಡಿ ದಾಟಿದವರಾ
ಎಲ್ಲರೂ ಮತದಾನ ಮಾಡಬನ್ನಿ
ನನಗೊಬ್ಬ ರಕ್ಷಕನ ಆಯ್ದು ತನ್ನಿ...||

ಜಾತಿ ಧರ್ಮ ದ್ವೇಷವ ಬಿತ್ತುವ
ಭ್ರಷ್ಟರ ಅಯೋಗ್ಯರ ಮೂಲೆಗಿಟ್ಟು
ಸಾಮರಸ್ಯ ಅಭಿವೃದ್ಧಿಯ ಚಿಂತನೆಗೆ
ಪ್ರಜಾತಂತ್ರ ನೀಡಿರುವ ಹಕ್ಕು||

ಅಮೂಲ್ಯ ಮತ ದೇಶಕೆ ವರದಾನ
ಪಂಚವರ್ಷದ ಪ್ರಗತಿಯ ಯಾನ
ಅವಸಾನ ತಡೆದು ಅನುದಾನ ಬಳಕೆ
ಬಲಿಬೇಡ ಹಣ ಅರಿವೆ ಹೆಂಡಕೆ||

ಎನ್ನೊಡಲ ಕೊಳ್ಳೆ ಹೊಡೆವ
ಕುಟಿಲ ಧುರ್ಯೋಧನರು ಬೇಡ
ರಜವೆಂದು ಮಜದಲ್ಲಿ ಮೈಮರೆಯಬೇಡ
ಪಣತೊಟ್ಟೆನ್ನ ಹೊಂಗನಸ ಸಾಕಾರಮಾಡು||

ಬೆರಳಲಿ ಅಳಿಸದ ಚಿತ್ರ ಬರೆಸಿ
ತಾಯನುಳಿಸಿ ಎತ್ತರಕೇರಿಸುವ
ಗರಿಮೆ ವಿಶ್ವದೆಲ್ಲೆಡೆ ಪಸರಿಸುವ
ದಕ್ಷ ಸರಕಾರವ ಅಧಿಕಾರಕ್ಕೆ ತನ್ನಿ||

ಓ ನನ್ನ ಮಡಿಲ ಕಂದಗಳಿರಾ...
ಸಮರ್ಥ ನಾಯಕನ ಆರಿಸಬನ್ನಿ...
ನಿಮ್ಮೆಲ್ಲ ಕಾರ್ಯಗಳ ಬದಿಗಿಟ್ಟು ಬನ್ನಿ...

✍️... ಅನಿತಾ ಜಿ.ಕೆ.ಭಟ್.
15-09-2020.

ಚಿತ್ರಕೃಪೆ:ಹವಿಸವಿ.

ಚುನಾವಣಾ ಸಂದರ್ಭದಲ್ಲಿ ಚಿತ್ರಕವನ ಸ್ಪರ್ಧೆಗೆ ಬರೆದ ಕವನ.


No comments:

Post a Comment