Tuesday, 15 September 2020

ಚಂದ್ರಚಕೋರಿ #ಕವನ



ಚಂದ್ರಚಕೋರಿ


ಅಂಕೆಯಿಲ್ಲದ ಶಂಕರೀ
ಆಟದಿ ತನ್ಮಯ ಕುವರಿ
ಇಚ್ಛಿತ ನಾಟ್ಯಮಯೂರಿ
ರವಿಯು ನಿನ್ನಲಿ ಮಂಡಿಯೂರಿ
ಬೇಡುತಿಹ ಬೆಂಗದಿರ ಬಳಿ ತೂರಿ...
ಯಾರೀ ಬೆಡಗಿ ಚಂದ್ರಚಕೋರಿ...

ಚೈತನ್ಯದ ಚಿಲುಮೆಯೀ ಬಂಗಾರಿ
ಒಂಟಿಯಾಗಿ ಜಗವ ಗೆಲ್ಲಹೊರಟ ಪೋರಿ
ಕುಂಟಾಬಿಲ್ಲೆ ಆಡುತ ಮೈಮರೆತವಳೇ
ಬಾಲ್ಯದಾಟವು ಜೀವನದ ರಸನಿಮಿಷಗಳೇ...

ಬಿಸಿಲು ನೆರಳಿನಾಟ ಜೀವನದ ಜಂಜಾಟ
ಹರಡಿದ ಕೇಶ ಸರಳತೆಯ ವೇಷ
ಪುಟ್ಟ ಕಾಲ್ಗಳಿಗೆ ಗೆಜ್ಜೆಯ ಶೃಂಗಾರ
ಲಂಗ ದಾವಣಿಯಲ್ಲಿ ಸಂತೃಪ್ತ ಬಾಲೆ...

ಆಟಿಕೆಗಳ ಬಯಕೆಯಿಲ್ಲ
ಸುತ್ತುವ ಕಾಲ್ಗಳು ಚಪ್ಪಲಿಯ ಬೇಡಿಲ್ಲ
ವೈಭವೋಪೇತ ಧಿರಿಸುಗಳ ಕಂಡಿಲ್ಲ
ಜೀವೋಲ್ಲಾಸ ಮಂದಹಾಸಕೆ ಕೊರತೆಯಿಲ್ಲ...

ಕಂಗಳಲಿ ಕಂಡ ಕನಸುಗಳ ಮಾಲೆ
ಅಂತರಂಗದೊಳು ಭಾವದ ಸರಮಾಲೆ
ಸಿರಿಲಕ್ಷ್ಮಿ ಕುವರಿಯಂತಿಪ್ಪ ಬಾಲೆ
ಹರಿಸುತಿಹಳು  ಸಂತಸದ ಅಲೆ...

✍️... ಅನಿತಾ ಜಿ.ಕೆ.ಭಟ್.
15-09-2020.


ಚಿತ್ರ- ಹವಿಸವಿ ಕೃಪೆ

No comments:

Post a Comment