Tuesday, 22 September 2020

ಒಗ್ಗಟ್ಟಿನಲಿ ಬಲವು..#ಕವನ

 



     ಒಗ್ಗಟ್ಟಿನಲಿ ಬಲವು

ದುಡಿದು ದಣಿದಿದೆ ದೇಹ
ಸುಕ್ಕುಗಟ್ಟಿದ ಚರ್ಮ
ಸಾರುತಿಹುದಿಲ್ಲಿ ಬಾಳ ಮರ್ಮ||

ಒಂದೊಂದು ಗೆರೆಯಲಿ
ನೂರಾರು ಬವಣೆ
ಹೊತ್ತು ಸಾಗಿದ ಬಾಳ ಹೊಣೆ||

ಹಿರಿಯರನು ಅನುಸರಿಸಿ ಕಿರಿಜೀವ
ನಡೆಸುತಿದೆ ದರಬಾರು
ಆಗೊಮ್ಮೆ ಈಗೊಮ್ಮೆ ಮಿತಿಯಿರದ ಕಾರುಬಾರು||

ಎಳೆಯ ಚಿಗುರದು
ಇನ್ನೂ ಮಾಗಿಲ್ಲ ಜಗದಲಿ
ಮುಗ್ಧತೆಯ ಎಳಸು ಕೈಗಳಲಿ||

ಹಿರಿಕಿರಿಯರ ಬೆವರು
ಅರಿವಿರದ ಹೊಸ ತಲೆಮಾರು
ಜೊತೆ ಸೇರಿ ಎಳೆವ ಬಾಳ ತೇರು||

ಹಸನಾದ ಜೀವನವು
ಹಸಿರಾದ ಹೊಲವು
ಬಸಿರಾದ ಒಲವು
ಒಗ್ಗಟ್ಟಿನಲಿ ಬಲವು
ಸಾರುತಿದೆ ಪಟವು||

✍️... ಅನಿತಾ ಜಿ.ಕೆ.ಭಟ್.
22-09-2020.

ಚಿತ್ರ :ಹವಿಸವಿ ಕೃಪೆ

No comments:

Post a Comment