ಉಗಿಯ ಬಂಡಿ _ ಬಾಳ ಬಂಡಿ
ಚುಕುಬುಕು ರೈಲಿನ ಬಂಡಿ
ವೇಗದಿ ಸಾಗುತ ಏನೇನ್ ಕಂಡಿ ?||
ಹಳಿಯ ಮೇಲಿನ ಹಳೆಯ ಬಂಡಿ
ಗಿಜಿಗುಟ್ಟುವ ಜನರಿಗೆ ಹವೆಯದು ಥಂಡಿ ||
ನಿತ್ಯವು ದುಡಿದು ಬಾಳಿನ ಬಂಡಿ
ಎಳೆಯಲು ಏರುವ ಸಾಮಾನ್ಯರ ದಂಡು||
ರೈಲಿನ ಪಯಣ ಬಡವರಿಗೆ ಸ್ವರ್ಗ
ಟಿಕೆಟ್ ದರವು ಬಲು ಅಗ್ಗ ||
ಬಡವರಿಗುಂಟು ಸಾಮಾನ್ಯದ ಬೋಗಿ
ಸಿರಿಕರಿಗೆಂದೇ'ತಂಪುಹವಾ'ವಿಶೇಷವಾಗಿ
ಇನ್ನೂ ಚೆಂದಿದೆ 'ನಿದ್ರಾ ಬೋಗಿ'
ಸಾಲದಿದ್ದರೆ ಮಹಡಿ ಹತ್ತಿ ಹೋಗಿ ||
ಕನಸುಗಳ ಬೆನ್ನೇರಿ;ಉಗಿಬಂಡಿಯ ಮೇಲೇರಿ
ದೂರದೂರಿಗೆ ಪಯಣಗೈದವರೆಷ್ಟೋ
ಹತ್ತಿದವರ ಭಾರವೆನದೆ ಹೊತ್ತು
ಗಮ್ಯ ಸ್ಥಾನವ ಮುಟ್ಟಿಸಿ ಬಿಟ್ಟೆ ||
ಯಾರೋ ಹತ್ತಿ ಇನ್ನಾರೋ ಇಳಿದರು
ಬಾಳದಾರಿಯಲಿ ಸಿಕ್ಕ ಸಹಪಯಣಿಗರು
ನಿತ್ಯದ ಓಟದಿ ಸವೆದಿಹುದು ಗಾಲಿ
ದಿನದ ಜಂಜಾಟದಿ ಮನುಜ ಬೆಂಡಾಗಿ ಬಳಲಿ ||
ರೈಲಮ್ಮ ನಿನ್ನ ಮಡಿಲು
ಭಿಕ್ಷುಕರ,ಕಳ್ಳರ,ಇಲಿಗಳ ಒಡಲು
ಎಂದೆಂದಿಗೂ ಆಗದಿರಲಿ ||
✍️.. ಅನಿತಾ ಜಿ.ಕೆ.ಭಟ್.
14-09-2020.
ಚಿತ್ರ ಕೃಪೆ : ಹವಿಸವಿ ಬಳಗ.
No comments:
Post a Comment