Saturday, 26 September 2020

ಸೀರೆರವಿಕೆ,ಚೂಡೀದಾರ್ ಟಾಪ್'ಗಳ ಗೋಳು

 


ಸೀರೆರವಿಕೆ, ಚೂಡಿದಾರ್ ಟಾಪ್'ಗಳ ಗೋಳು

ಆಗಲ್ಲಪ್ಪ ಇನ್ನು ಮುಂದೆ
ಮೂರು ಸ್ಟಿಚ್ಚು ಬಿಡಿಸಿಕೊಂಡೆ
ನಿನ್ನ ಕೆಟ್ಟಕೊಬ್ಬು ತಾಳಲಾರೆ| ಕಾಪಾಡೆಯಾ..

ಆರು ತಿಂಗಳು ಮೂಲೆಲಿ ನಿಂದೆ
ಮುಗ್ಲು ವಾಸ್ನೆ ಸಹಿಸಿಕೊಂಡೆ
ನೋಡಿ ನನ್ನ ಕಣ್ಣೀರಧಾರೆ|ದಯೆತೋರೆಯಾ..

ರುಚಿಯ ಅಡಿಗೆ ನೀನು ತಿಂದೆ
ಅಂಗಾಂಗ ಪುಷ್ಟಿ ಮಾಡಿಕೊಂಡೆ
ಬೇಡಿಕೊಂಬೆ ಮನಸಾರೆ |ತೂಕ ಇಳಿಸೆಯಾ..

ನಿನ್ನ ದೇಹ ತುರುಕಲೆಂದು
ನಾ ಮೂಲರೂಪ ಕಳೆದುಕೊಂಡೆ
ಇನ್ನು ಚೂರೂ ಹಿಗ್ಗಲಾರೆ|ನನ್ನ ಮಿತಿಯನರಿಯೆಯಾ..

(ಶಿವಪ್ಪಾ ಕಾಯೋ ತಂದೆ-ಗೀತರಚನೆಕಾರರಾದ
ಲಾವಣಿ ನಂಜಪ್ಪನವರ ಕ್ಷಮೆ ಕೋರುತ್ತಾ..)

✍️... ಅನಿತಾ ಜಿ.ಕೆ.ಭಟ್.
26-09-2020.


3 comments:

  1. 😂🤣😂🤣

    ಅಯ್ಯೋ ಇದು ಒಂದು ದೊಡ್ಡ ಗೊಳಾಯ್ತಲ್ಲಪ್ಪಾ...

    ReplyDelete
    Replies
    1. ಹೌದು.ನಮ್ಮ ಪರದಾಟ...ಬಟ್ಟೆಗಳಿಗೆ ಸಂಕಟ

      Delete
    2. ಥ್ಯಾಂಕ್ಯೂ 💐🙏

      Delete