Sunday, 20 September 2020

ಕುಚ್ಚಿ ತೆಗವನಾ...#ಹವ್ಯಕಭಾಷಾ ಬರಹ

 




ಕುಚ್ಚಿ ತೆಗವನಾ ...


    ಎಂತಾ ಹೇಳುದಪ್ಪ ಈ ಲಾಕ್ ಡೌನ್ ನ ಫಜೀತಿಗಳ.ಮಕ್ಕಳ ಪರೀಕ್ಷೆ ಗೌಜಿಲಿ ಕುಚ್ಚಿ ತೆಗೆಶುದು "ಈಗ ಬೇಡ.ಪರೀಕ್ಷೆ ಕಳುದಿಕ್ಕಿಸಾಕು" ಹೇಳಿ ಯಾವ ಮುಹೂರ್ತಲಿ ಎನ್ನ ನಾಲಗೆ ಹೇಳಿತ್ತೋ ದೇವರಿಂಗೇ ಗೊಂತು.ಕುಚ್ಚಿ ಉದ್ದ ಬಪ್ಪಗ ಸೆಲೂನ್ ಬಂದ್ ಆತನ್ನೆ..ಇಬ್ಬರ ತಲೆಕಸವುದೇ ತಲೆಂದ ಕೆಳಯಿಳುದು ಕೆಮಿವರೆಗೆ ಹಣೆವರೆಗೆ ಎತ್ತಿತ್ತು.ನೆತ್ತಿಲೊಂದು ಜೊಟ್ಟು ಕಟ್ಟಿ ನವಿಲುಗರಿ ಸಿಕ್ಕಿಸಿರೆ ಎರಡುದೆ ಪುಟ್ಟು ಕಿಟ್ಟಚಾಮಿಗಳೇ .. .. ರಜೆಲಿ ಎಂತ ಕೆಲಸ ಇವಕ್ಕೆ..ತಿಂಬದು..ಆಡುದು..ತಲೆ ತೊರುಸುದು..ಬೆಗರಿರೆ ಶವರಿನಡಿಲಿ ನಿಂದು ಮಿಂದಿಕ್ಕಿ ಬಪ್ಪದು..ತಲೆ ಸರಿ ಉದ್ದದ್ದೆ ನೀರರಿಶಿಗೊಂಡು ಬಂದರೆ ಭಾರೀ ಖುಷಿ.. "ಆಹಾ.. ಎಷ್ಟು ತಂಪಾವ್ತು ಹೇಳುಗು.."

     ಹೀಂಗೆ ಬಿಟ್ಟರಾಗ ಹೇಳಿ "ಕುಚ್ಚಿ ತೆಗವನಾ" ಹೇಳಿಗೊಂಡು ಮಕ್ಕಳ ಹಿಂದೆ ಬಿದ್ದೆ.ಅಷ್ಟಪ್ಪಗ ಚೆಂದ ಬಾಚಿಕ್ಕಿ  ಇದು ಹೊಸ ಸ್ಟೈಲ್ ಹೇಳಿ ಒಂದು ಸ್ಮೈಲ್ ಕೊಟ್ಟಿಕ್ಕಿ ನಡೆಗು."ಹೇನುತುಂಬುಗನ್ನೆ ..ಎನಗೆಡಿಯ ಹೇನು ಬಾಚಿ ಟಿಕ್ ಟಿಕ್ ಕುಟ್ಟಿ ಸಾಯಿಸುಲೆ" ಹೇಳುವಗ "ಮತ್ತೆ ನಿಂಗೊಗೆಂತಾರು ಕೆಲಸ ಬೇಕನ್ನೆ.. ಒಂದು ಕೆಲಸಾತು ಇರಲಿ.."ಹೇಳಿದವು ಎರಡು ಜನದೇ...ಅಂಬಗಳೋ°.. ಪುರುಸೊತ್ತು ಇಪ್ಪದು ಇವಕ್ಕೆ. ಎನಗೆ ಒಂದು ಮಿನಿಟು ಕೂಪಲೂ ಪುರುಸೊತ್ತಿಲ್ಲೆ.

        ಸೆಕೆಯಪ್ಪಗ ಕುಚ್ಚಿಯ ಹಿಡಿದಿಡುದು ಎಳವಲೆ ಸುರುಮಾಡಿದ ಕುಞ್ಞಿಮಾಣಿ.."ಕುಚ್ಚಿ ತೆಗವನಾ" ಹೇಳುವ ರಾಗ ಸುರುಮಾಡಿದೆ ಪುನಃ.. "ಅದೊಂದು ಬಿಟ್ಟು ಬೇರೆಂತಾರು ಹೇಳಮ್ಮ".ಹೇಳಿದ..ದೊಡ್ಡ ಮಗ ಅಂತೂ ಎರಡು ಕೈಲಿ ಒಟ್ಟಿಂಗೆ ತಲೆತೊರುಸುಲೆ ಸುರುಮಾಡಿಯಪ್ಪಗ "ಹಾಂಗೆ ಎರಡು ಕೈಲಿ ಒಟ್ಟಿಂಗೆ ತಲೆತೊರುಸುಲಾಗಡ..ನಿನ್ನ ಅಜ್ಜಿ ಹೇಳಿದ್ದು..ಬೇಕಾರೆ ಒಂದೇ ಕೈಲಿ ತೊರುಸಿಗ.." "ಅಬ್ಬಬ್ಬಾ.. ನಿಂಗಳ ಅಜ್ಜಿ ಶಾಸ್ತ್ರಂಗೊ ಮುಗಿವಲೇ ಇಲ್ಲೆ.."ಹೇಳುವ ಸಸಾರ..

        ಈ ಕುಚ್ಚಿ ತೆಗವದು ಹೇಳುವಗ ನೆಂಪಾವುತ್ತು  ಎನ್ನಪ್ಪನ ಮನೆಗೆ ಕುಚ್ಚಿತೆಗವಲೆ ಬಂದುಗೊಂಡಿದ್ದ ರುಕ್ಮಯ ಭಂಡಾರಿಯ.ತಿಂಗಳಿಂಗೊಂದರಿ ತಪ್ಪದ್ದೆ ಬಕ್ಕು.. ಒಂದು ಮೆಟ್ಟುಕತ್ತಿ ಅದಕ್ಕೆ ಕೂಪಲೆ.ಈಗಾಣಾಂಗೆ ತಿರುಗುವ ಕುರ್ಶಿ ಎಲ್ಲ ಇಲ್ಲೆ.ಇನ್ನೊಂದು ಮೆಟ್ಟುಕತ್ತಿ ಕುಚ್ಚಿ ತೆಗೆಶಿಗೊಂಬವಕ್ಕೆ ಕೂಪಲೆ..ಎಂಗ ಮಕ್ಕೊ ಎಲ್ಲಾ ಸಾಲಾಗಿ ಚಿಟ್ಟೆಲಿ ಕೂಪೆಯೊ°.ಎಂತಕೆ ಕುಚ್ಚಿ ತೆಗೆಶುಲಾ..? ಅಲ್ಲಪ್ಪಾ...ಅಪ್ಪ ,ದೊಡ್ಡಪ್ಪ, ಅಜ್ಜ ಮೂರು ಜನರ ಕುಚ್ಚಿ ತೆಗೆಶಿಯಪ್ಪಗ ಊರ ಮೇಗಾಣ ಶುದ್ದಿಗೊ ಎಲ್ಲ ರುಕ್ಮಯ ಭಂಡಾರಿಯ ಬಾಯಿಲ್ಲೆ  ಕಥೆಯಾಂಗೆ ಹೆರಬಕ್ಕು.ಎಂಗೊಗೆ ಕೇಳುಲೆ ಭಾರೀ ಖುಷಿ..ಎಲ್ಲಿಂದಲೋ ಇರುಳು ನಡಕ್ಕೊಂಡು ಬಪ್ಪಗ ಕುಲೆ ಹೆದರಿಸಿದ್ದು,ಕಲ್ಲಿಡ್ಕಿದ್ದು,ಆರದೋ ಪೊಣ್ಣು ಇನ್ನಾರದೋ ಆಣನೊಟ್ಟಿಂಗೆ ಎಸ್ಕೇಪ್ ಆದ್ದು,ಭಾರೀ ಒಳ್ಳೆ ಮನುಷ್ಯಂಗೆ ಊರಿಲ್ಲೇ ಇಲ್ಲದ್ದ ಅಪರೂಪದ ಖಾಯಿಲೆ ಬಂದು ತೀರಿಹೋದ್ದು,  ಆರೋ ಸಾಲ ಮಾಡಿ ಕಟ್ಟುಲೆಡಿಯದ್ದೆ ಸೋತದು ..ಹೀಂಗಿದ್ದದೆಲ್ಲ ಶುದ್ದಿ ಬಕ್ಕು.ಭಂಡಾರಿ ಹೇಳುದರ ಕೇಳುವಗ ಎಂಗಳ ಕಣ್ಣಮುಂದೆ ಆ ಚಿತ್ರಂಗ ಎಲ್ಲ ಮೂಡುಗು.ಅಷ್ಟು ಲಾಯಕಲಿ ಹೆಳುಗಪ್ಪ ಭಂಡಾರಿ.ಮತ್ತೆ ಮಧ್ಯಾಹ್ನ ಊಟ ಉಂಡಿಕ್ಕಿ ಅಪ್ಪನೋ ದೊಡ್ಡಪ್ಪನೋ ಹತ್ತೋ ಇಪ್ಪತ್ತೋ ರೂಪಾಯಿ ಕೊಟ್ಟದರ ಸುರುಟಿ ಸುರುಟಿ ಸಪೂರ ಮಾಡಿ .. ಸುತ್ತಿದ ಬೆಳಿಮುಂಡಿನ ಸೊಂಟದ ಜಾಗೆಲಿ ಎಡೆಂಗೆ ಮಡುಗಿ ಮುಂಡಿನ ಹೆರಂಗೊಂದರಿ ತಿರ್ಪುಗು.ಅಲ್ಲಿಗೆ ಪೈಸೆ ಭದ್ರ ಹೇಳಿಯೇ ಲೆಕ್ಕ.

        ಈಗ ಎನ್ನ ಮಕ್ಕೊಗೆ ಆನೇ ಭಂಡಾರಿ ಆಯೆಕ್ಕಾದ ಕಾಲ ಬಂತು ಹೇಳಿ "ಕುಚ್ಚಿ ತೆಗವ" ಹೇಳಿ ರಜ ಸ್ವರ ಏರಿಸಿ ಹೇಳಿದೆ.ಅದೇ ಧಾಟಿಲಿ ದೊಡ್ಡ ಮಗನುದೇ "ಬೇಡ ..ಎನಗೆ ಸೆಲೂನಿಲೇ ಆಯೆಕ್ಕು" ಹೇಳಿದ°.ಬೆಂಬಿಡದ ಭೂತದ ಹಾಂಗೆ  ಅವನ ಹಿಂದೆಯೇ ಹೋದೆ.ಮನೆಗೆ ಎರಡು ಸುತ್ತು ಓಡಿದ..ಎನ್ನನ್ನೂ ಓಡಿಸಿದ ಹೇಳುವ."ನಟ ಬೆಶಿಲಿಂಗೆ ನಿನ್ನದು ಲಾಕ್ ಡೌನ್ ಎಕ್ಸರ್ಸೈಜಾ.." ಹೇಳಿ ಕಾಲೆಳೆದ ಯಜಮಾನರ ಮೇಲೆ ಪಿಸುರೂ ಬಂತಿಕ್ಕಿತ್ತು.ಅಲ್ಲ ಮಾಣಿಯಂಗಳ ಕುಚ್ಚಿ ಕೂಸುಗಳ ಬಾಬ್ ಕಟ್ ನಾಂಗೆ ಕಂಡರೂ ಕುಚ್ಚಿ ತೆಗವಲೆ ಹೆರಡದ್ದ ಗೆಂಡ ಎನ್ನ ಹಾಸ್ಯ ಮಾಡುಲೆ ಹೆರಡುದಂಬಗ.. ಎಂತಾ ಹೇಳೆಕ್ಕು..ಎನಗೂ ಹಠ ಬಂತು..ಕುಚ್ಚಿ ತೆಗದೇ ಸಿದ್ಧ ಹೇಳಿ ಶಪಥ ಮಾಡಿಗೊಂಡೆ.

         ಒಳಬಪ್ಪಗ ಕುಞ್ಞಿ ಮಾಣಿ ಚಿಟ್ಟೆಲಿ ಕೂದುಗೊಂಡಿದ್ದ."ಕುಚ್ಚಿ ತೆಗವೊ° ಮಗ° " ಹೇಳಿದ್ದಕ್ಕೆ ಪ್ರತ್ಯುತ್ತರ ಎಂತ ಬಯಿಂದಿಲ್ಲೆ.'ಮೌನಂ ಸಮ್ಮತಿ ಲಕ್ಷಣಂ' ಹೇಳಿ ಶಾಲೆಲಿ ಸಂಸ್ಕೃತ ಮಾಷ್ಟ್ರ° ಅರದು ಕುಡಿಶಿದ್ದು ಮರದ್ದಿಲ್ಲೆ.ಇದುವೇ ಸಮಯ ಹೇಳಿ ಕತ್ತರಿ ,ಹಣಿಗೆ ತೆಕ್ಕೊಂಡು ಬಂದೆ.ಏಪ್ರನ್ ಹಾಯ್ಕೊಂಡಿತ್ತಿದ್ದೆ."ಅದ.. ಅಮ್ಮ ಕೂದಲು ಆಪರೇಷನ್ ಗೆ ಹೆರಟವದ" ಹೇಳಿ ದೊಡ್ಡ ಮಾಣಿ ಕೆಣಕ್ಕಲೆ ಸುರುಮಾಡಿದ ಕುಞ್ಞಿಮಾಣಿಯ.

       ಒಂದು ಕುರ್ಶಿಲಿ ಕೂರಿಸಿ ಕೊರಳಿಂಗೊಂದು ಹರ್ಕಟೆ ಬೈರಾಸ ಬಿಗುದು ..ಕುಚ್ಚಿ ತೆಗವಲೆ ಸುರುಮಾಡೆಕ್ಕಾರೆ ಮದಲು ನಾಲ್ಕು ಸರ್ತಿ ಸೆಲೂನಿನವರ ಸ್ಟೈಲಿಲಿ ಕತ್ತರಿಯ ಕಚಕ್ ಕಚಕ್ ಮಾಡಿದೆ .ಎದುರೆ ಹಣೆಗೆ ಬೀಳುದರ ತೆಗಕ್ಕೊಂಡು ಬಪ್ಪದ್ದೆ ಇವು ಬಂದವು."ಅದು ರಜಾ ಓರೆಯಾತು  ಹೇಳಿಗೊಂಡು.." ಸರಿ ಮಾಡುಲೇಳಿ ರಜ ಕತ್ತರ್ಸಿದೆ..ಈಗ ಹೆಚ್ಚಾತು ಹೇಳೆಕ್ಕಾ..ನೆತ್ತಿಂದಲೂ ರಜ ಕುಚ್ಚಿ ತೆಗದಪ್ಪಗ ನೆತ್ತಿ ಬೋಳುಕಾಣ್ತು ಹೇಳಿದವು.ಅಮರಿಗೊಂಡಿದ್ದ ದೊಡ್ಡ ಮಾಣಿಯೂ ಬಂದ."ಅಮ್ಮಾ ಹಿಂದಾಣೊಡೆ ಲೆಫ್ಟಿಲಿ ತೆಳ್ಳಂಗಾಯಿದು ರೈಟಿಂದ.." ..ರೈಟ್ ಹೇಳಿ ಕತ್ತರಿಯ ಬಲಮಂಡೆಗೆ ತಿರುಗಿಸಿ ಕಚಕ್ ಕಚಕ್ ಮಾಡಿದೆ.ಕೆಮಿ ಹತ್ತರೆ ತೆಗವಗ ಅದು ಹಾಂಗಲ್ಲ ಹೀಂಗೆ ಹೇಳಿ ವಾದಕ್ಕಿಳಿವಲೆ ಹೆರಟಪ್ಪಗ ..ಕುಞ್ಞಿಮಾಣಿ "ನಿಂಗ ಹೀಂಗೆ ಡಿಸ್ಟರ್ಬ್ ಮಾಡಿದರೆ ಇಬ್ರಿಂಗೂ ಈಗ ಆನೇ ಹೇರ್ ಕಟ್ ಮಾಡ್ತೆ" ಹೇಳುವಗ ಈ ಲೂಟಿ ತಮ್ಮ ಮಾಡಿರೂ ಮಾಡಿಕ್ಕುಗು ಹೇಳಿ ದೊಡ್ಡ ಮಾಣಿ ಪದ್ರಾಡ್..ಕುಚ್ಚಿ ತೆಗದಪ್ಪಗ ಕುಞ್ಞಿಮಾಣಿಯ ಒಪ್ಪ ಕಾಣ್ತು ನೋಡು ಹೇಳಿ ಅಲ್ಲಿಯೇ ಕಿಟಕಿಯ ಗ್ಲಾಸಿಲಿ ತೋರಿಸಿದೆ."ಯಬ್ಬಾ..ಮೋರೆಕರೆ ಇಷ್ಟು ಬೋಳುಮಾಡಿದ್ದಿರಾ" ...ಕೇಳಿಕ್ಕಿ ಮೋರೆಕುಞ್ಞಿ ಮಾಡಿದ .."ಈಗ ತಲೆಯೊಳ ಗಾಳಿ ಹೊಗ್ಗುತ್ತಪ್ಪಾ ರಜಾ.".ಹೇಳಿಗೊಂಡು ಅವನೇ ಸಮಾಧಾನಪಟ್ಟುಗೊಂಡು ಅಣ್ಣನ ದಿನಿಗೇಳಿದ."ಬಾ..ಈಗ ನಿನಗೆ ಆನೇ ಭಂಡಾರಿ " ಹೇಳಿ..ಅವ ಪಿಳಿಪಿಳಿ ಕಣ್ಣು ಮಾಡಿಗೊಂಡು "ಬೇಡ...ಬೇಡ" ಹೇಳಿದರೆ ..ಈಗ ಅಪ್ಪಂಗೂ ಉಮೇದು ಬಂದು ಹಿಡುದು ಕೂರಿಸಿ ಕುಚ್ಚಿ ತೆಗವ ಶಾಸ್ತ್ರಸುರು ಮಾಡಿದವು.ಆಚೊಡೇಂಗೆ ಸರಿ ಮಾಡುಲೆ ಈಚೊಡೇಂದ ..ಈಚೊಡೇಂಗೆ ಸರಿಮಾಡುಲೆ ಆಚೊಡೇಂದ ತೆಗದಪ್ಪಗ ಮಂಡೆ ಬೋಳಾತು ಹೇಳುವ°...

       ಈಗ ಎರಡು ಮಾಣಿಯಂಗಳೂ ಅಪ್ಪಂಗುದೇ ಎಂಗ ಹೇರ್ ಕಟ್ ಮಾಡ್ತೆಯ ಹೇಳಿದವು..ಲೆಫ್ಟ್ ಸೈಡ್ ದೊಡ್ಡ ಮಾಣಿಯಡೊ ರೈಟಿಲಿ ಕುಞ್ಞಿಮಾಣಿಯಡೊ..ಹೀಂಗೆ ಕುಚ್ಚಿತೆಗದರೆ ವಿದೂಷಕನಾಂಗೆ ಕಾಂಗು ಹೇಳಿದೆ...ದೊಡ್ಡವ ಹಿಂದೆ ಕುಞ್ಞಿಮಾಣಿ ಮುಂದೆ ತೆಗೇರಿ ಹೇಳಿ ಒಪ್ಪಿಸಿದೆಯ.ಕುಚ್ಚಿ ತೆಗವಲೆ ಸುರುಮಾಡಿಯಪ್ಪಗ ಕುಞ್ಞಿಮಾಣಿ ಕೇಳಿದ "ಎದುರಾಣ ಹೊಡೇಲಿ  ತಲೆಕಸವೇ ಇಲ್ಲೆಪ್ಪ..ಆನೇಂಗೆ ಕುಚ್ಚಿತೆಗವದು..? " ಕರೆಬರಿಲಿದ್ದದರನ್ನೇ ತೆಗವ ಶಾಸ್ತ್ರ ಮಾಡಿಯಾತು.

      ಅಂತೂ ಇಂತೂ ಮೂರು ಜನರದ್ದೂ ಕುಚ್ಚಿ ತೆಗದೂ ಆತು ...ಹೊಸ ಕೆಲಸ ಕಲ್ತಾಂಗೂ ಆತು..ಎಂತಾದರುದೇ ನಮ್ಮ ಕೆಲಸ ನಾವೇ ಮಾಡಿಗೊಂಬಗ ಒಂದು ಖುಷಿಯೇ ಬೇರೆ ಅಲ್ಲದಾ...

✍️... ಅನಿತಾ ಜಿ.ಕೆ.ಭಟ್.
20-09-2020.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವಿಷು ವಿಶೇಷ ಸ್ಪರ್ಧೆಗೆ ಬರದ ಹಾಸ್ಯಲೇಖನ.(ಐನೂರು ಶಬ್ದಗಳ ಮಿತಿ).

ಬರಹದ ಕೆಳಗಡೆ ಇರುವ Home,> ಸಂಕೇತಗಳನ್ನು ಬಳಸಿಕೊಳ್ಳಬಹುದು.view web version ಗೆ ಹೋದರೆ ಅಲ್ಲಿ ಫಾಲೋ/follow ಮಾಡುವ ಆಪ್ಷನ್ ಸಿಗುತ್ತದೆ.ಫಾಲೋ ಮಾಡಬಹುದು.


6 comments:

  1. ಅಯ್ಯಪ್ಪಾ... ಕುಚ್ಚಿ ಕಥೆ ಸೂಪರ್.‌ನೆಗೆ ಮಾಡಿ ಸಾಕಾತು.

    ReplyDelete
  2. Lockdown ಈ ಕೆಲಸವನ್ನು ಮಾಡ್ಸಿತ್ತನ್ನೆ... Laika ಆಯ್ದು ಬರಹ...

    ReplyDelete
  3. ಎಲ್ಲಾರ ಮನೆಲೂ ಇದೆ ಕಥೆ ಚೆನ್ನಾಗಿದೆ 👌✍

    ReplyDelete